Monday, April 21, 2025
Google search engine

Homeಅಪರಾಧಟ್ಯಾಂಕರ್ - ಕಾರ್ ಡಿಕ್ಕಿ: 6 ಜನರು ಸ್ಥಳದಲ್ಲೇ ಸಾವು

ಟ್ಯಾಂಕರ್ – ಕಾರ್ ಡಿಕ್ಕಿ: 6 ಜನರು ಸ್ಥಳದಲ್ಲೇ ಸಾವು

ಪಂಜಾಬ್: ಸುನಮ್ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಇಂದು ಗುರುವಾರ ನಡೆದಿದೆ. ಟ್ಯಾಂಕರ್ ಮತ್ತು ಕಾರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ೬ ಜೀವಗಳು ಬಲಿಯಾಗಿವೆ. ಕಾರಿನಲ್ಲಿ ಹೊರಟ್ಟಿದ್ದ ಆರು ಜನರು ಮಲೇರಕೋಟ್ಲದಲ್ಲಿ ಪೂಜೆ ಸಲ್ಲಿಸಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಇದೇ ವೇಳೆ, ಮಾರ್ಗಮಧ್ಯೆ ಟ್ಯಾಂಕರ್ ವೊಂದು ಕಾರಿಗೆ ಡಿಕ್ಕಿ ಹೊಡೆದು ನಂತರ, ಎದುರಿಗೆ ಬರುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಮಗು ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮರಣೋತ್ತರ ಪರೀಕ್ಷೆಗಾಗಿ ಮೂವರ ಶವಗಳನ್ನು ಸುನಮ್ ಆಸ್ಪತ್ರೆಗೆ ಹಾಗೂ ಇನ್ನೂ ಮೂವರ ಮೃತದೇಹಗಳನ್ನು ಸಂಗ್ರೂರ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ದುರಂತದಲ್ಲಿ ಮೃತಪಟ್ಟವರು ಪಂಜಾಬ್‌ನ ಸುನಮ್ ಪ್ರದೇಶಕ್ಕೆ ಸೇರಿದ್ದಾರೆ.

RELATED ARTICLES
- Advertisment -
Google search engine

Most Popular