ಪಿರಿಯಾಪಟ್ಟಣ: ಟಿಎಪಿಸಿಎಂಎಸ್ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಚ್.ಡಿ ವಿಜಯ್ ಮತ್ತು ಉಪಾಧ್ಯಕ್ಷರಾಗಿ ಸುನೀತ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ದೊರೆಕೆರೆ ನಾಗೇಂದ್ರ ಉಪಾಧ್ಯಕ್ಷ ಪಿ.ವಿ ಜಲೇಂದ್ರ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಪಟ್ಟಣದ ಟಿಎಪಿಸಿಎಂಎಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಡಿ ವಿಜಯ್ ಉಪಾಧ್ಯಕ್ಷ ಸ್ಥಾನಕ್ಕೆ ಸುನಿತ ಮಂಜುನಾಥ್ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆ ಚುನಾವಣಾಧಿಕಾರಿ ಸಿಡಿಒ ಯತೀಂದ್ರ ಅವಿರೋಧ ಆಯ್ಕೆ ಘೋಷಿಸಿದರು.
ಫಲಿತಾಂಶ ಬಳಿಕ ಬೆಂಬಲಿಗರು ಸಿಹಿ ಹಂಚಿ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸನ್ಮಾನಿಸಿ ಶುಭ ಕೋರಿದರು.
ಈ ವೇಳೆ ನೂತನ ಅಧ್ಯಕ್ಷ ಎಚ್.ಡಿ ವಿಜಯ್ ಉಪಾಧ್ಯಕ್ಷೇ ಸುನಿತಾ ಮಂಜುನಾಥ್ ಮಾತನಾಡಿ ನಮಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಶೇರುದಾರರ ಹಿತ ಕಾದು ಸಂಘದ ಅಭಿವೃದ್ಧಿಗೆ ಶ್ರಮಿಸಿ ಸವಲತ್ತುಗಳನ್ನು ನಿಗದಿತ ಸಮಯಕ್ಕೆ ತಲುಪಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಟಿಎಪಿಸಿಎಂಎಸ್ ನಿರ್ದೇಶಕರಾದ ಎಸ್.ರಾಮು, ದೊರೆಕೆರೆ ನಾಗೇಂದ್ರ, ಜವರಪ್ಪ, ಕುಮಾರ್, ಸಿ.ಎನ್.ರವಿ, ಸರ್ವಮಂಗಳ, ತಿಮ್ಮೇಗೌಡ, ತಿಮ್ಮನಾಯಕ, ಜಲೇಂದ್ರ, ಮಹದೇವ್, ಮುಕೇಶ್ ಕುಮಾರ್, ಸಿಇಓ ಕಲಾವತಿ ಮತ್ತು ಸಿಬ್ಬಂದಿ ಹಾಜರಿದ್ದರು.
