Saturday, April 19, 2025
Google search engine

Homeಸಿನಿಮಾತರುಣ್-ಸೋನಲ್ ಮದುವೆ: ಹಿಂದು ಸಂಪ್ರದಾಯದಂತೆ ವಿವಾಹ

ತರುಣ್-ಸೋನಲ್ ಮದುವೆ: ಹಿಂದು ಸಂಪ್ರದಾಯದಂತೆ ವಿವಾಹ

ಬೆಂಗಳೂರು: ಸ್ಯಾಂಡಲ್‌ವುಡ್‌ ನಿರ್ದೇಶಕ ತರುಣ್‌ ಸುಧೀರ್‌, ಸೋನಲ್‌ ಮೊಂಥೆರೋ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಶನಿವಾರ (ಆಗಸ್ಟ್‌ 10ರಂದು) ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಆರತಕ್ಷತೆ ನಡೆಯಿತು. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ ವುಡ್‌ ತಾರೆಯರು, ರಾಜಕೀಯ ಗಣ್ಯರು ಸೇರಿದಂತೆ ಹತ್ತಾರು ಮಂದಿ ಶುಭಕೋರಿ ನವ ಜೋಡಿಗೆ ಹಾರೈಸಿದ್ದರು.

ಭಾನುವಾರ(ಆ.11ರಂದು) ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. ಹಿಂದೂ ಸಂಪ್ರದಾಯದಂತೆ ಎರಡು ಕುಟುಂಬದ ಗುರು – ಹಿರಿಯರ ಸಮ್ಮುಖದಲ್ಲಿ ನವಜೋಡಿ ಹೊಸ ಜೀವನಕ್ಕೆ ಕಾಲಿಟ್ಟರು.

ಯಾರೆಲ್ಲಾ ಭಾಗಿಯಾಗಿದ್ದರು..?

ವಿವಾಹ ಕಾರ್ಯಕ್ರಮದಲ್ಲಿ ಹಿರಿಯ ನಟಿ ಶ್ರುತಿ, ಸುಧಾರಾಣಿ,‌ ಮಾಳವಿಕ ಅವಿನಾಶ್‌, ನಟ ಅವಿನಾಶ್‌, ಮೇಘನಾ ಗಾಂವ್ಕರ್‌, ಪ್ರೇಮ್‌, ಅಮೃತಾ ಪ್ರೇಮ್, ನಟಿ ನಿಶ್ವಿಕಾ ನಾಯ್ಡು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ,ತೆಲುಗು ನಟ ಜಗಪತಿ ಬಾಬು, ನಟ ಶರಣ್‌, ಗೋಲ್ಡನ್‌ ಸ್ಟಾರ್‌ ಗಣೇಶ್‌, ನಟ ವಿನೋದ್‌ ರಾಜ್, ಗಾಯಕ ಚೇತನ್‌ ಸೇರಿದಂತೆ ಹಲವು ಸ್ಯಾಂಡಲ್‌ ವುಡ್‌ ತಾರೆಯರು ಹಾಗೂ ಗಣ್ಯರು ಈ ಕ್ಷಣಕ್ಕೆ ಸಾಕ್ಷಿಯಾದರು.

ಮಂಗಳೂರು ಮೂಲದ ಸೋನಲ್‌ ಕೋಸ್ಟಲ್‌ ವುಡ್‌ ಚಿತ್ರರಂಗದಲ್ಲಿ ಮಿಂಚಿ, ಆ ಬಳಿಕ ಸ್ಯಾಂಡಲ್‌ ವುಡ್‌ ನಲ್ಲಿ ʼರಾಬರ್ಟ್‌ʼ, ʼಗರಡಿʼ, ʼಪಂಚತಂತ್ರʼ ದಂತಹ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡು, ಬೇಡಿಕೆಯ ನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ʼರಾಬರ್ಟ್‌ʼ ಸಿನಿಮಾದಲ್ಲಿ ವಿನೋದ್‌ ಪ್ರಭಾಕರ್‌ ಅವರಿಗೆ ಜೋಡಿಯಾಗಿ ಸೋನಲ್‌ ನಟಿಸಿದ್ದರು. ಈ ಸಿನಿಮಾವನ್ನು ತರುಣ್‌ ಸುಧೀರ್‌ ನಿರ್ದೇಶನ ಮಾಡಿದ್ದರು.

RELATED ARTICLES
- Advertisment -
Google search engine

Most Popular