ಹನೂರು: ಹನೂರು ಪಟ್ಟಣದಲ್ಲಿ ಸುಮುಖ ಎಂಟರ್ಪ್ರೈಸಸ್ ನಲ್ಲಿ ಕಳ್ಳತನ ವಾಗಿದ್ದ ವಾಹನ ಒಂದುವರೆ ವರ್ಷದ ಬಳಿಕ ಮಾಲೀಕನಿಂದಲೇ ಪತ್ತೆಯಾಗಿರುವ ಘಟನೆ ನಡೆದಿದೆ. ಕಳೆದ ಒಂದುವರೆ ವರ್ಷಗಳ ಹಿಂದೆ ಸುಮುಖ ಎಂಟರ್ಪ್ರೈಸಸ್ ನಲ್ಲಿ ಕಳುವಾಗಿದ್ದ ಟಾಟಾ ಎಸ್ ವಾಹನವನ್ನು ಮಾಲೀಕನೇ ಮಂಡ್ಯ ಜಿಲ್ಲೆಯಲ್ಲಿ ಪತ್ತೆ ಹಚ್ಚಿರುವಂತಹ ಘಟನೆ ಭಾನುವಾರದಂದು ನಡೆದಿದೆ.
ಮಾದೇಶ ಎಂಬುವವರು ತಮ್ಮ ವಾಹನವನ್ನು ಪತ್ತೆ ಹಚ್ಚಿರುವ ಮಾಲೀಕ. 2022ರ ಜುಲೈ 10ರಂದು ಮಧ್ಯರಾತ್ರಿ ಪಟ್ಟಣದ ಸುಮುಖ ಎಂಟರ್ಪ್ರೈಸಸ್ ನಲ್ಲಿ ಯಾರೋ ಕಿಡಿಗೇಡಿಗಳು ಒಳ ನುಗ್ಗಿ ಲ್ಯಾಪ್ಟಾಪ್ ,ಜೆ ಎಸ್ ಡಬ್ಲ್ಯೂ ಶೀಟ್ ಗಳ ಜೊತೆಗೆ ಟಾಟಾ ಏಸ್ ಕದ್ದೊಯ್ದಿದ್ದರು. ಈ ಕಳ್ಳತನ ಪ್ರಕರಣದಲ್ಲಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚುವಲ್ಲಿ ಹನೂರು ಪೊಲೀಸರು ವಿಫಲರಾಗಿದ್ದರು. ಆದರೆ ಒಂದೂವರೆ ವರ್ಷದ ಬಳಿಕ ನಾಗಮಂಗಲದಲ್ಲಿ ತಮ್ಮ ವಾಹನ ಓಡಾಡುತ್ತಿರುವುದನ್ನು ಮಾದೇಶ್ ಪತ್ತೆ ಹಚ್ಚಿ ಪೊಲೀಸರಿಗೆ ತಿಳಿಸಿದ್ದಾರೆ . ಸಂಬಂಧ ಮಂಡ್ಯ ಜಿಲ್ಲೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.