ಹನೂರು : ತೆಳ್ಳನೂರು – ಬಂಡಳ್ಳಿ ಮಾರ್ಗ ಮದ್ಯೆದ ತಿರುವಿನೊಂದರಲ್ಲಿ ಪಪ್ಪಾಯಿ ಹಣ್ಣು ತುಂಬಿದ ಟಾಟಾಎಸ್ ವಾಹನ ಪಲ್ಟಿಯಾಗಿ ರಸ್ತೆಯಲ್ಲಿ ಹಣ್ಣು ಚಲ್ಲಾಪಿಲ್ಲಿಯಾಗಿ ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಹನೂರು ಸಮೀಪದ ತೆಳ್ಳನೂರು ಹಾಗೂ ಬಂಡಳ್ಳಿ ಗ್ರಾಮದ ಮುಖ್ಯ ರಸ್ತೆಯ ತಿರುವಿನೊಂದರಲ್ಲಿ ಭಾನುವಾರದಂದು ಈ ಘಟನೆ ಜರುಗಿದ್ದು ಈ ಭಾಗದ ಕೆಲ ಕಡೆ ವಾಹನ ಚಾಲನೆ ಅಪಾಯಕಾರಿಯಾಗಿದ್ದು, ಈಗಾಗಲೇ ಕಳೆದ ವಾರದೀಚಗೆ ಎರಡು ಸರಕು ಸಾಗಾಟದ ವಾಹನಗಳು ಪಲ್ಟಿಯಾಗಿವೆ. ಕಳೆದ ವಾರ ಚಿಂಚಳ್ಳಿ ಮೂಲದ ಮಹೇಶ್ ಎಂಬುವವರಿಗೆ ಸೇರಿದ ಟಾಟ್ ಏಸ್ ವಾಹನ ಪಲ್ಟಿಯಾದರೆ ಬಾನುವಾರವೂ ಸಹ ಪಪ್ಪಾಯಿ ತುಂಬಿದ ಮತ್ತೊಂದು ಟಾಟಾಏಸ್ ವಾಹನ ಪಲ್ಟಿಯಾಗಿ ವಾಹನದ ಮುಂಬಾಗ ಗ್ಲಾಸ್ ಜಖಂಗೊಂಡು ಪಪ್ಪಾಯಿ ಹಣ್ಣು ರಸ್ತೆಯೆಲ್ಲಾ ಚೆಲ್ಲಾಪಿಲ್ಲಿಯಾಗಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮುಂದಿನ ದಿನಗಳಲ್ಲಿ ಈ ಮಾರ್ಗದಲ್ಲಿ ಅಪಘಾತಗಳಿಗೆ ಕಡಿವಾಣ ಹಾಕಲು ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಅಪಾಯಕ್ಕೆ ಆಹ್ವಾನ ನೀಡುವ ಈ ಮಾರ್ಗಗಳ ಅಪಾಯಕಾರಿ ಸ್ಥಳದಲ್ಲಿ ವಾಹನ ನಿಲುಗಡೆಗೊಳಿಸದಂತೆ ಹಾಗೂ ವಾಹನ ಸವಾರರು ನಿಧಾನವಾಗಿ ಚಲಿಸುವಂತೆ ಸೂಚನಾ ಫಲಕ ಅಳವಡಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಇಲ್ಲಿನ ಸ್ಥಳೀಯರು ಒತ್ತಾಯ ಮಾಡಿದ್ದಾರೆ.