Monday, April 21, 2025
Google search engine

Homeರಾಜ್ಯಹಿಂದುಗಳ ತೆರಿಗೆ ಹಿಂದುಗಳ ಹಕ್ಕು: ವಿವಾದಕ್ಕೆ ಕಾರಣವಾದ ಶಾಸಕ ಹರೀಶ್ ಪೂಂಜ ಅವರ ಫೇಸ್ ಬುಕ್...

ಹಿಂದುಗಳ ತೆರಿಗೆ ಹಿಂದುಗಳ ಹಕ್ಕು: ವಿವಾದಕ್ಕೆ ಕಾರಣವಾದ ಶಾಸಕ ಹರೀಶ್ ಪೂಂಜ ಅವರ ಫೇಸ್ ಬುಕ್ ಬರಹ

ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ‌ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಫೇಸ್ ಬುಕ್ ನಲ್ಲಿ ತೆರಿಗೆಯ ಬಗ್ಗೆ ಹಾಕಿರುವ ಬರಹವೊಂದು ವಿವಾದಗಳಿಗೆ ಕಾರಣವಾಗಿದೆ.

ನನ್ನ ತೆರಿಗೆ ನನ್ನ ಹಕ್ಕು ಆಂದೋಲನದ ಹಿನ್ನೆಲೆಯಲ್ಲಿ ಅವರು “ಈ ಆರ್ಥಿಕ ವರ್ಷದಿಂದ ಹಿಂದುಗಳು ಕಟ್ಟಿರುವ ತೆರಿಗೆ ಹಣ ಹಿಂದುಗಳ ಅಭಿವೃದ್ಧಿಗೆ ಮಾತ್ರ ಉಪಯೋಗಿಸಬೇಕು. ಹಿಂದೂಗಳು ಕಟ್ಟಿದ ತೆರಿಗೆ ಬೇರೆ ಧರ್ಮಗಳ ಜನರಿಗೆ ಸೇರುವುದು ಹಿಂದೂಗಳಿಗೆ ಆಗುವ ಅನ್ಯಾಯ, ಹಿಂದುಗಳ ತೆರಿಗೆ ಹಿಂದುಗಳ ಹಕ್ಕು” ಎಂದು ಬರೆದಿದ್ದಾರೆ.

ಫೇಸ್ ಬುಕ್ ನಲ್ಲಿ ಹಲವರು ನೆಟ್ಟಿಗರು ಇದಕ್ಕೆ ತೀವ್ರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಮುಂದುವರಿದು ಮತ್ತೊಂದು ಪೋಸ್ಟ್ ಹಾಕಿದ್ದು, ದೇಶದಲ್ಲಿರುವ ತೆರಿಗೆ ಸಂಗ್ರಹದಲ್ಲಿ ಹಿಂದುಗಳ ಪಾಲೆಷ್ಟು ?ಇದರಲ್ಲಿ ಹಿಂದುಗಳ ಅಭಿವೃದ್ಧಿಗೆ ಉಪಯೋಗವಾಗುತ್ತಿರುವುದು ಎಷ್ಟು? ಹಿಂದುಗಳ ತೆರಿಗೆ ಹಿಂದುಗಳಿಗೆ ಸಲ್ಲಬೇಕು ಎಂಬ ಇನ್ನೊಂದು ಪೋಸ್ಟ್ ಅನ್ನೂ ಹಾಕಿದ್ದಾರೆ. ಇದು ಸಾಮಾಜಿಕ‌ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾಗಿದೆ.

RELATED ARTICLES
- Advertisment -
Google search engine

Most Popular