ಮೈಸೂರು: ಶಿಕ್ಷಕರ ಕ್ಷೇತ್ರದ ಚುನಾವಣೆಯ ನಿಮಿತ್ತ ಇಂದು ಮೈಸೂರಿನ ಮಹಾರಾಜ ಮತ್ತು ಯುವರಾಜ ಕಾಲೇಜಿನಲ್ಲಿ ಮತಯಾಚನೆ ಮಾಡಲಾಯಿತು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಮರಿತಿಬ್ಬೇಗೌಡ ರವರಿಗೆ ಮೊದಲನೆಯ ಪ್ರಾಶಸ್ತ್ಯದ ಮತವನ್ನು ನೀಡಬೇಕೆಂದು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಎಂ ಲಕ್ಷ್ಮಣ್ ರವರು ಹಾಗೂ ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್ ಮೂರ್ತಿರವರು. ನಗರ ಪ್ರಧಾನ ಕಾರ್ಯದರ್ಶಿಗಳಾದ ಎಂ ಶಿವಣ್ಣ. ಭಾಸ್ಕರ್ ಎಲ್ ಗೌಡ, ಗಿರೀಶ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಿ ಎಂ ರಾಮು, ಮಾಜಿ ಮೇಯರ್ ಗಳಾದ ಮೂದಮಣಿ, ಬಿಕೆ ಪ್ರಕಾಶ್. ಕೆಪಿಸಿಸಿ ಮಹಿಳಾ ಉಪಾಧ್ಯಕ್ಷರಾದ ಪುಷ್ಪವಲ್ಲಿ ಇನ್ನು ಮುಂತಾದ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.