Saturday, April 12, 2025
Google search engine

Homeರಾಜ್ಯಸುದ್ದಿಜಾಲಸಮರ್ಥನಂ ಅಂಗವಿಕಲರ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಣೆ

ಸಮರ್ಥನಂ ಅಂಗವಿಕಲರ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಣೆ

ಮೈಸೂರು: ನಗರದ ೨ನೇ ಹಂತದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆಯ ಬುದ್ಧಿ ವಿಕಲಚೇತನ ಶಾಲೆಯ ಆವರಣದಲ್ಲಿ ಶಿಕ್ಷಕರ ದಿನಾಚರಣೆ ಆಚರಣೆ ಮಾಡಲಾಯಿತು.

ನಿವೃತ್ತ ಪ್ರಾಧ್ಯಾಪಕ ಪಿ.ಪುಟ್ಟವೀರಪ್ಪ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿ, ಉತ್ತಮ ಶಿಕ್ಷಕರು ಕೇವಲ ಪುಸ್ತಕದಲ್ಲಿನ ಪಾಠವನ್ನು ಮಾತ್ರ ಹೇಳುವುದಿಲ್ಲ. ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವನ್ನು ಹೇಳುವುದು ಮಾತ್ರವಲ್ಲದೇ ಮೈಗೂಡಿಸಿಕೊಳ್ಳುವುದು ಹೇಗೆ ಎಂದು ಕಲಿಸುತ್ತಾರೆ ಎಂದರು.

ಅಲ್ಲದೆ ಶಿಕ್ಷಕ ಕಲಿಯಲು ಬೆಂಬಲಿಸುತ್ತಾರೆ. ವಿದ್ಯಾರ್ಥಿಗಳು ತಪ್ಪು ಮಾಡಿದರೆ ಅದನ್ನು ಸೂಕ್ಷ್ಮವಾಗಿ ತಿದ್ದುತ್ತಾರೆ. ಉತ್ತಮ ಪ್ರಜೆ ಆಗಲು ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತಾರೆ. ನಾಳೆ ನಾವು ಉತ್ತಮ ಪ್ರಜೆಗಳಾಗಿ ಏನಾದರೂ ಸಾಧನೆ ಮಾಡುತ್ತೇವೆಂದರೆ ಶಿಕ್ಷಕರು ಇಲ್ಲಿ ಹಾಕಿದ ಅಡಿಪಾಯವೇ ಕಾರಣ ಎಂದರು.

ಸಮರ್ಥನಂ ಅಂಗವಿಕಲ ಸಂಸ್ಥೆ ಮೈಸೂರು ವಿಭಾಗೀಯ ಮುಖ್ಯಸ್ಥ ಶಿವರಾಜು, ಮಾತನಾಡಿ, ಜೀವನದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವುದನ್ನು ಹೇಳಿಕೊಡುವುದು ಶಿಕ್ಷಕರೇ. ಅಂತಹ ಉತ್ತಮ ಶಿಕ್ಷಕರನ್ನು ನಾವೆಲ್ಲರೂ ಪಡೆದಿದ್ದೇವೆ ಎಂದು ಭಾವಿಸುತ್ತಾ, ನಾವು ಇವರ ಆಜ್ಞೆಗಳನ್ನು ತಪ್ಪದೇ ಪಾಲಿಸೋಣ ಎಂದರು. ಇದೆ ಸಂದರ್ಭದಲ್ಲಿ ಬುದ್ಧಿ ವಿಕಲಚೇತನ ಶಾಲೆಯ ಮುಖ್ಯೋಪಾಧ್ಯಾಯಿನಿ ಭ್ರಮಾರಂಬ, ವಿಶೇ? ಶಿಕ್ಷಕರಾದ ಪದ್ಮ, ಬೃಂದಾ ಬಾಯಿ, ವಿದ್ಯಾವತಿ, ಕಂಪ್ಯೂಟರ್ ಶಿಕ್ಷಕಿ ಸ್ಪರ್ಶ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸದರಿ ಕಾರ್ಯಕ್ರಮದಲ್ಲಿ ವಿಜ್ಞಾನಿ ಡಾ.ರವಿಶಂಕರ್, ಸಿಬ್ಬಂದಿಗಳಾದ ಮಂಟೇಶ, ಮಹದೇವು, ಮಂಜುಳ, ಶರೀಫ್, ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ ೬೩೬೪೮೬೭೮೧೮, ೮೧೨೩೭೨೫೯೪೯

RELATED ARTICLES
- Advertisment -
Google search engine

Most Popular