ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಮೈಸೂರು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕೆ.ಆರ್.ನಗರ ತಾಲೂಕಿನ ಮೂರು ಮತ್ತು ಸಾಲಿಗ್ರಾಮ ತಾಲೂಕಿನ ಮೂರು ಶಿಕ್ಷಕರು ಆಯ್ಕೆಯಾಗಿದ್ದಾರೆ.
ಸಾಲಿಗ್ರಾಮ ತಾಲೂಕಿನಿಂದ ಸಂಭ್ರವಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಜಯಸ್ವಾಮಿ, ಮುದುಗುಪ್ಪೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ್ ಹನಸೋಗೆ, ಮತ್ತು ದೇವಿ ತಂದ್ರೆ ಸರ್ಕಾರಿ ಪ್ರೌಡಶಾಲೆಯ ಸಹಶಿಕ್ಷಕ ಸತೀಶ್ ಮಿರ್ಲೆ ಅವರಿಗೆ ಈ ಅತ್ಯುತ್ತಮ ಶಿಕ್ಷಕಕ ಪ್ರಶಸ್ತಿ ಲಭ್ಯವಾಗಿದೆ.
ಇನ್ನು ಕೆ.ಆರ್‌ನಗರ ತಾಲೂಕಿನ ಸಾತಿಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮಂಜುರಾಜ್ ,ಕುಂಬಾರ ಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಕೃಷ್ಣನಾಯಕ, ದೊಡ್ಡೆಕೊಪ್ಪಲು ಸರ್ಕಾರಿ ಪ್ರೌಡಶಾಲೆಯ ಶಿಕ್ಷಕ ಭಕ್ತಿ ಪ್ರಸಾದ್ ಅವರು ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಇವರಿಗೆ ಮೈಸೂರಿ ಕಲಾ ಮಂದಿರದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ .
ತಮ್ಮ ವೃತ್ತಿಯಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯ ಜತಗೆ ಶಾಲೆಯ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಇವರನ್ನು ಕೆ.ಆರ್.ನಗರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಬಿ.ಆರ್.ಸಿ.ವೆಂಕಟೇಶ್ ಸಿ.ಆರ್.ಪಿ.ಚನ್ನಂಗೆರೆ ಪ್ರಭು , ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಅರುಣ್ ಕುಮಾರ್,ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಲಕ್ಕಿಕುಪ್ಪೆ ಶಂಕರೇಗೌಡ, ರಾಜ್ಯ ವಿಭಾಗಿಯ ಕಾರ್ಯದರ್ಶಿ ಸುರೇಶ್ ಸಂಗರಶೆಟ್ಟಹಳ್ಳಿ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಕಲ್ಯಾಣಪುರ ರಾಜಶೇಖರ್ , ಪ್ರಧಾನಕಾರ್ಯದರ್ಶಿ ಚಿಕ್ಕಕೊಪ್ಪಲು ಸಿ.ಎಲ್. ಸ್ವಾಮಿ ಅಭಿನಂಧಿಸಿದ್ದಾರೆ.