Sunday, April 20, 2025
Google search engine

Homeಸ್ಥಳೀಯಪರಿಸರದ ಬಗ್ಗೆ ಅರಿವು ಮೂಡಿಸಲು ಮಕ್ಕಳಿಗೆ ಪರಿಸರ ಜ್ಞಾನವನ್ನು ಶಿಕ್ಷಕರು ಬೋದಿಸಬೇಕು: ಶಾಸಕ ಎ.ಆರ್.ಕೃಷ್ಣಮೂರ್ತಿ

ಪರಿಸರದ ಬಗ್ಗೆ ಅರಿವು ಮೂಡಿಸಲು ಮಕ್ಕಳಿಗೆ ಪರಿಸರ ಜ್ಞಾನವನ್ನು ಶಿಕ್ಷಕರು ಬೋದಿಸಬೇಕು: ಶಾಸಕ ಎ.ಆರ್.ಕೃಷ್ಣಮೂರ್ತಿ

ಕೊಳ್ಳೇಗಾಲ: ಮಲೈಮಹದೇಶ್ವರ ವನ್ಯಜೀವಿ ವಿಭಾಗ, ಕೊಳ್ಳೇಗಾಲ ಹಾಗೂ ಸಾಮಾಜಿಕ ಅರಣ್ಯ ವಿಭಾಗ ಮತ್ತು ಬಿ.ಆರ್.ಟಿ ಹುಲಿ ಸಂರಕ್ಷಿತಾ ಪ್ರದೇಶ ಚಾ.ನಗರ ಇವರ ಸಂಯುಕ್ತಾಶಯದಲ್ಲಿ ಮರಡಿಗುಡ್ಡ ವೃಕ್ಷ ವನದಲ್ಲಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಭಾಗವಹಿಸಿ ಶಾಲಾ ಮಕ್ಕಳಿಗೆ ಉಚಿತವಾಗಿ ಸಸಿ ವಿತರಿಸಿ, ಪರಿಸರದ ಬಗ್ಗೆ ಅರಿವು ಮೂಡಿಸಲು ಮಕ್ಕಳಿಗೆ ಪರಿಸರ ಜ್ಞಾನವನ್ನು ಶಿಕ್ಷಕರು ಬೋದಿಸಬೇಕು. ಇದರಿಂದ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ವಾತಾವರಣವನ್ನು ಕಾಪಾಡಲು ಸಾಧ್ಯ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಸಾಂಕೇತಿಕವಾಗಿ ಗಿಡ ನೆಟ್ಟು ನೀರು ಹಾಕಿ ಜಿಲ್ಲೆಯಲ್ಲಿ ಕೋಟಿ ವೃಕ್ಷಾಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಲೈ ಮಹದೇಶ್ವರ ವನ್ಯಜೀವಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂತೋಷ ಕುಮಾರ್ ಮಾತನಾಡಿ, ಮಾನ್ಯ ಶಾಸಕರಾದ ಕೃಷ್ಣಮೂರ್ತಿ ರವರ ತಂದೆ ಬಿ.ರಾಚಯ್ಯರವರು 1960 ರಲ್ಲೇ ಪರಿಸರ ಪ್ರೇಮಿ ಎಂಬ ಖ್ಯಾತಿ ಪಡೆದಿದ್ದರು.ಇವರ ಅಧಿಕಾರ ಅವಧಿಯಲ್ಲಿ ಹಲವಾರು ಸುಧಾರಣೆ ತಂದು ಖಾಲಿ ಜಾಗಗಳಲ್ಲಿ ಮರ ಬೆಳೆಸುವ ಯೋಜನೆಗಳನ್ನು ಜಾರಿಗೊಳಿಸಿದರು. ಅದೇ ರೀತಿ ಎ.ಆರ್.ಕೃಷ್ಣಮೂರ್ತಿ ರವರು ಸಹಾ ಪರಿಸರದ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾರೆ. ಇವರ ಅಧಿಕಾರ ಅವಧಿಯಲ್ಲಿ ಒಂದು ಕೋಟಿ ವೃಕ್ಷ ಬೆಳೆಸುವ ಗುರಿ ಮುಟ್ಟುವುದಾಗಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯಾಧಿಕಾರಿ ಬಿ.ಎಸ್.ಶಶಿಧರ್, ವಲಯ ಅರಣ್ಯಾಧಿಕಾರಿ ಭರತ್, ವಲಯ ಅರಣ್ಯಧಿಕಾರಿ ಪ್ರಪುಲ್, ಪ್ರವೀಣ್ ಹಾಗೂ ಇತರರು ಇದ್ದರು.

RELATED ARTICLES
- Advertisment -
Google search engine

Most Popular