Friday, April 11, 2025
Google search engine

Homeಸಿನಿಮಾ‘ಲಂಗೋಟಿ ಮ್ಯಾನ್‌’ ಚಿತ್ರದ ಟೀಸರ್ ಬಿಡುಗಡೆ

‘ಲಂಗೋಟಿ ಮ್ಯಾನ್‌’ ಚಿತ್ರದ ಟೀಸರ್ ಬಿಡುಗಡೆ

‘ಲಂಗೋಟಿ ಮ್ಯಾನ್‌’ – ಹೀಗೊಂದು ಶೀರ್ಷಿಕೆಯಡಿ ಸಿನಿಮಾವೊಂದು ತಯಾರಾಗಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ನಟ ಶರಣ್‌ ಟೀಸರ್‌ ಬಿಡುಗಡೆ ಮಾಡಿ ಶುಭಕೋರಿದರು. ತನು ಟಾಕೀಸ್‌ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಸಂಜೋತ ಭಂಡಾರಿ ಕಥೆ ಬರೆದು ನಿರ್ದೇಶಿಸಿದ್ದಾರೆ.

ಟೀಸರ್‌ ರಿಲೀಸ್‌ ಬಳಿಕ ಮಾತನಾಡಿದ ನಿರ್ದೇಶಕಿ ಸಂಜೋತಾ, “ನಾನು ಹತ್ತು ವರ್ಷಗಳ ಹಿಂದೆ ಮಿರ್ಚಿ ಮಂಡಕ್ಕಿ ಖಡಕ್‌ ಚಾಯ್ಸ್ ಚಿತ್ರವನ್ನು ನಿರ್ದೇಶಿಸಿದ್ದೆ. ಇದು ಎರಡನೇ ಚಿತ್ರ ಎಂದು ಮಾತನಾಡಿದ ನಿರ್ದೇಶಕಿ ಸಂಜೋತ ಭಂಡಾರಿ, ನಾನು ಬೇರೆ ಒಂದು ಚಿತ್ರದ ಕಥೆ ಮಾಡುತ್ತಿದ್ದಾಗ ಈ ಕಾನ್ಸೆಪ್ಟ್ ಬಂತು. ಆ ಚಿತ್ರದ ಕಥೆ ಮಾಡುತ್ತಿದ್ದಾಗಲೂ ನನಗೆ ಇದೇ ಕಥೆ ತಲೆಗೆ ಬರುತ್ತಿತ್ತು. ಕೊನೆಗೆ ಲಂಗೋಟಿ ಮ್ಯಾನ್‌ ಸಿನಿಮಾ ಸ್ವರೂಪ ಪಡೆದುಕೊಂಡಿತು. ಈ ಚಿತ್ರದಲ್ಲಿ ನಿಜವಾದ ಹೀರೋ ಅಂದರೆ ಲಂಗೋಟಿನೇ. ಈ ಚಿತ್ರದ ಕಂಟೆಂಟ್‌ ಅದಕ್ಕೇನು ಬೇಕೋ ಅದನ್ನು ತಗೊಂಡು ಅದೇ ಮುಂದುವರೆದಿದೆ’ ಎಂದರು.

ಚಿತ್ರದಲ್ಲಿ ನಟಿಸಿರುವ ಆಕಾಶ್‌ ರಾಂಬೊ, ಧೀರೇಂದ್ರ, ಸಂಹಿತಾ ವಿನ್ಯಾ ಮುಂತಾದ ಕಲಾವಿದರು ಚಿತ್ರದ ಕುರಿತು ಮಾತನಾಡಿದರು.

RELATED ARTICLES
- Advertisment -
Google search engine

Most Popular