ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ನಗರದ ಹೊರವಲಯದ ಕೆತ್ತಿಕಲ್ ನಲ್ಲಿ ಭಾರೀ ಅಪಾಯಕಾರಿ ಭೂ ಕುಸಿತದ ಎಚ್ಚರಿಕೆಯನ್ನು ತಾಂತ್ರಿಕ ಸಮಿತಿ ನೀಡಿದೆ. ಹೀಗಾಗಿ ಕೆತ್ತಿಕಲ್ ಗುಡ್ಡದ ಮೇಲ್ಭಾಗದ 100 ಕ್ಕೂ ಅಧಿಕ ಮನೆಗಳಿಗೆ ಅಪಾಯ ಎದುರಾಗಿದೆ. ಮಂಗಳೂರು ಪಾಲಿಕೆ ಇಂಜಿನಿಯರಿಂಗ್ ತಂಡವು ಸ್ಥಳ ಪರಿಶೀಲಿಸಿ ಈ ಎಚ್ಚರಿಕೆ ನೀಡಿದೆ.
ಇದೇ ವೇಳೆ ಗುಡ್ಡದ ಹತ್ತು ಅಡಿ ಸಮೀಪದ 12 ಮನೆಗಳು ಮೋಸ್ಟ್ ಡೇಂಜರ್ ಎಂದು ಗುರುತಿಸಲಾಗಿದ್ದು
12 ಮನೆಗಳ ಬುಡದ ಸಮೀಪದವರೆಗೂ ಭಾರೀ ಭೂ ಕುಸಿತ ಉಂಟಾಗಿದೆ. ಸದ್ಯ 12 ಮನೆಗಳಿಗೆ ನೊಟೀಸ್ ನೀಡಿ ಮನೆ ಖಾಲಿ ಮಾಡಿಸಲಾಗಿದೆ. ಯಾಕಂದ್ರೆ ಮತ್ತಷ್ಟು ಭೂಕುಸಿತವಾದ್ರೆ 12 ಮನೆಗಳು ಸಂಪೂರ್ಣ ಧರಾಶಾಹಿ ಆಗುವ ಸಾಧ್ಯತೆ ಇದೆ. ಹೀಗಾಗಿ ಸುಸಜ್ಜಿತ 12 ಮನೆಗಳನ್ನು ಖಾಲಿ ಮಾಡಿದ ನಿವಾಸಿಗಳು ಮನೆ ಬಿಟ್ಟಿದ್ದಾರೆ. ವಯನಾಡ್ ಮಾದರಿಯಲ್ಲಿ ಭೂ ಕುಸಿತವಾದ್ರೆ ಉಳಿದ 100 ಮನೆಗಳಿಗೆ ಡೇಂಜರ್ ಆಗಲಿದೆ.
ಭೂ ಕುಸಿತವಾಗಿ ಗುಡ್ಡದ ಮಣ್ಣು ಜಾರಿದ್ರೆ ರಾಷ್ಟ್ರೀಯ ಹೆದ್ದಾರಿಯೇ ಸರ್ವನಾಶ. ಹೀಗಾಗಿ ಹೆದ್ದಾರಿ ಜೊತೆಗೆ ಗುಡ್ಡದ ಕೆಳಭಾಗದಲ್ಲೂ ಭಾರೀ ಅನಾಹುತದ ಆತಂಕ ಎದುರಾಗಿದೆ.
ಯಾಕಂದ್ರೆ ಇಲ್ಲಿ ಗುಡ್ಡದ ಮೇಲ್ಬಾಗದ ಜೊತೆಗೆ ಕೆಳಭಾಗದಲ್ಲೂ ಇವೆ ನೂರಾರು ಮನೆಗಳಿವೆ.
ಸದ್ಯ ಭೂ ಕುಸಿತ ತಡೆಯಲು ಗುಡ್ಡಕ್ಕೆ ಸಿಮೆಂಟ್ ಪ್ಲಾಸ್ಟರಿಂಗ್ ಕಾಮಗಾರಿ ನಡೆಸಲಾಗ್ತಿದೆ. ಹೆದ್ದಾರಿಯ ಒಂದು ಭಾಗದ ರಸ್ತೆ ಮುಚ್ಚಿ ಕಬ್ಬಿಣದ ನೆಟ್ ಮಾದರಿ ಬೆಡ್ಡಿಂಗ್ ಬಳಸಿ ಸಿಮೆಂಟ್ ಪ್ಲಾಸ್ಟರಿಂಗ್ ನಡೆಸಲಾಗುತ್ತಿದೆ.