ಹುಣಸೂರು : ಜನಗಣತಿ ಸರ್ವೇ ಕಾರ್ಯದ ಎರಡನೇ ದಿನವು ಸರ್ವರ್ ಸಮಸ್ಯೆಯಿಂದ ಮೊಬೈಲ್ ಆ್ಯಪ್ ಸರಿಯಾಗಿ ಕೆಲಸ ಮಾಡದ ಕಾರಣ ಬುಧವಾರ ಶಿಕ್ಷಕರು ಗೊಂದಲಕ್ಕೀಡಾದ ಪ್ರಸಂಗ ನಡೆಯಿತು.
ಸರಕಾರದ ಅವೈಜ್ಞಾನಿಕ ನಿರ್ಧಾರದಿಂದ ಗ್ರಾಮಾಂತರ ಪ್ರದೇಶದಲ್ಲಿ ಶಿಕ್ಷಕರು ಶೈಕ್ಷಣಿಕ, ಆರ್ಥಿಕ, ಉದ್ಯೋಗ ಹಾಗೂ (ಜಾತಿ)ಜನಗಣತಿಗೆ ಸರ್ವೇ ಕಾರ್ಯಮಾಡಲು ತೆರಳಿದಾಗ ಹಲವು ಸಮಸ್ಯೆಗಳು ತಲೆದೋರುತ್ತಿದ್ದು, ಎರಡು ದಿನದಲ್ಲಿ ಒಟ್ಟಾರೆ ಶೇಕಡಾ 10 ರಷ್ಟು ಜನಗಣತಿ ಆಗದೆ ಸಮಸ್ಯೆ ಉಲ್ಬಣವಾಗಿದೆ.
ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಜನಗಣತಿಯಲ್ಲಿ ಶಿಕ್ಷಕರನ್ನು. ನೇಮಿಸುವಾಗ ವೈಜ್ಞಾನಿಕವಾಗಿ ನಡೆದುಕೊಳ್ಳದೆ 59ರ ವಯೋಮಿತಿಯ ಶಿಕ್ಷಕರನ್ನು ನೇಮಿಸಿರುವುದರಿಂದ ಅವರಿಗೆ ಮಾನಸಿವಾಗಿ ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಿಂದ ಸರ್ವೇ ಕಾರ್ಯ ಕೂಡ ವಿಳಂಬವಾಗಿದೆ ಎಂದು ಕೆಲ ಶಿಕ್ಷಕರು ತಿಳಿಸಿದರು.
ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಶಿಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಜನಗಣತಿಗೆ ಆ್ಯಪ್ ಹ್ಯಾಂಗ್ ಸರಿಹೋಗದಿದ್ದರೆ. ಜನಗಣತಿ ಸಮಸ್ಯೆ ಇನ್ನೂ ಹೆಚ್ಚಾಗಲಿದೆ. ಆದ್ದರಿಂದ ಸರಕಾರ ಈ ಕೂಡಲೇ ಶಿಕ್ಷಕರ ಸಮಸ್ಯೆಗಳನ್ನು ಆಲಿಸುವುದರ ಜತೆಗೆ ಹಬ್ಬಗಳು ಮುಗಿದ ನಂತರ ಜನಗಣತಿ ಮುಂದುವರೆಸಿದರೆ ಆಗ ಸುಲಲಿತವಾಗಬಹುದು ಎಂದರು.
ತಾಲೂಕು ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ನರಸಿಂಹ, ಸಿ.ಆರ್.ಪಿ ಅಶ್ವಿನಿ, ಸಿ.ಆರ್.ಪಿ.ನಾಗರಾಜು, ಕೆ.ಸಿ.ಕುಮಾರ್, ಪ್ರವೀಣ್, ಮುಖ್ಯ ಶಿಕ್ಷ ಮಾಧು ಪ್ರಸಾದ್, ದೈಹಿಕ ಶಿಕ್ಷಕ ನಾಗರಾಜು, ಮಂಜು, ಶಿಕ್ಷಕಿಯರಾದ ರೇಖಾ, ವಿದ್ಯಾ ಮತ್ತು ಹಿಂದುಳಿದ ಇಲಾಖೆಯ ವಾಸಿಂ ಇದ್ದರು.