ರ್ಯಾಂಪ್ ಯೋಜನೆಯಡಿ ಟೆಕ್ನಾಲಜಿ ಕ್ಲಿನಿಕ್ ಜಾಗೃತಿ ಕಾರ್ಯಾಗಾರ ವಿ ಕೇರ್ ಸೊಸೈಟಿ ಬೆಂಗಳೂರು ಸಹಯೋಗದಲ್ಲಿ ಸುಳ್ಯ ಎ.ಪಿ.ಎಂ.ಸಿ ಹಾಲ್‍ನಲ್ಲಿ ನಡೆಯಿತು.
ಕಾಸಿಯಾ ಪ್ರತಿನಿಧಿ ಅರುಣ್ ಪಡಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್‍ದಾಸ್ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಂ.ಎಸ್.ಎಂ.ಇ ಗಳ ಸವಾರ್ಂಗೀಣ ಬೆಳವಣಿಗೆಗೆ ಟೆಕ್ನಾಲಜಿ ಕ್ಲಿನಿಕ್ ಕಾರ್ಯಕ್ರಮಗಳ ಪಾತ್ರವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಹಾರ ಸಂಸ್ಕರಣೆ ತಜ್ಞ ಜಿತೇಂದ್ರ ಕುಮಾರ್, ಓಮ್ನಿಸೋಫ್ ರಿಸರ್ಚ್ ಪ್ರೈವೇಟ್ ಲಿಮಿಟೆಡ್ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ದೀಕ್ಷಿತ್ ಕೆ. ಶೆಟ್ಟಿ, ಡ್ರೈಯರ್ ತಂತ್ರಜ್ಞಾನ ತಜ್ಞ ವಿಕ್ರಮ್ ವೈ ಇವರು ಉಪಯುಕ್ತ ಮತ್ತು ಪ್ರಾಯೋಗಿಕ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿ ಡಾ. ನಿತಿನ್ ಪ್ರಭು, ಪುತ್ತೂರು ಕೈಗಾರಿಕಾ ಸಂಘದ ಅಧ್ಯಕ್ಷ ಕೇಶವ ಅಮೈ, ವಿ ಕೇರ್ ಸೊಸೈಟಿ ಗಾಯತ್ರಿ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಅನೇಕ ಎಂ.ಎಸ್.ಎಂ.ಇ ಉದ್ಯಮಿಗಳು ಭಾಗವಹಿಸಿ ಸಂವಾದದಲ್ಲಿ ಪಾಲ್ಗೊಂಡರು. ಎಂ.ಎಸ್.ಎಂ.ಇ ವಿ ಕೇರ್ ಸೊಸೈಟಿ ಯೋಜನಾ ವ್ಯವಸ್ಥಾಪಕಿ ಶ್ರುತಿ ಆರ್ ಭಟ್ ಸ್ವಾಗತಿಸಿ, ಪುತ್ತೂರು ಕೈಗಾರಿಕಾ ಸಂಘದ ಕಾರ್ಯದರ್ಶಿ ರೂಪೇಶ್ ನಾಯ್ಕ್ ವಂದಿಸಿದರು.
ಎಂ.ಎಸ್.ಎಂ.ಇ ಉದ್ಯಮಿಗಳಿಗೆ ಗುಣಮಟ್ಟ ಸುಧಾರಣೆ, ಉತ್ಪಾದಕತೆ ವೃದ್ಧಿ ಹಾಗೂ ಸ್ಪರ್ಧಾತ್ಮಕತೆಯ ಬಗ್ಗೆ ಜಾಗೃತಿ ಮೂಡಿಸುವುದು ಕಾರ್ಯಾಗಾರದ ಮುಖ್ಯ ಉದ್ದೇಶವಾಗಿತ್ತು.
ಮಾಹಿತಿ: ಶಂಶೀರ್ ಬುಡೋಳಿ



