ಬಾಗಲಕೋಟೆ: ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆ ಸಾರ್ವಜನಿಕರು ನದಿ ಪಾತ್ರಗಳಿಗೆ ತೆರಳಬಾರದೆಂದು ಜಮಖಂಡಿ ತಹಶಿಲ್ದಾರ ಸದಾಶಿವ ಮುಕ್ಕೋಜಿ ಮನವಿ ಮಾಡಿದ್ದಾರೆ.
ಜಮಖಂಡಿ ತಾಲೂಕಿನ ಚಿಕ್ಕಪಸಲಗಿ ಬಳಿ ಶ್ರಮಬಿಂದು ಸಾಗರದ ಕೃಷ್ಣ ನದಿಯಲ್ಲಿ ಸೆಲ್ಫಿಗಾಗಿ ಯುವಕರು ಮುಗಿ ಬೀಳುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ ಯುವಕರ ಸೆಲ್ಪೀ ಹುಚ್ಚಾಟಕ್ಕೆ ಬ್ರೆಕ್ ಹಾಕಲು ತಾಲ್ಲೂಕು ಆಡಳಿತದಿಂದ ಕ್ರಮ ಕೈಗೊಳ್ಳಲಾಗಿದ್ದು, ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಸದ್ಯ ಜಮಖಂಡಿ ಉಪವಿಭಾಗದ ವ್ಯಾಪ್ತಿಯ ಹಿಪ್ಪರಗಿ ಬ್ಯಾರೇಜನಿಂದ ಕೃಷ್ಣ ನದಿಗೆ ಒಂದು ಲಕ್ಷ ಎರಡು ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ.
ನದಿ ಉಕ್ಕಿ ಹರಿಯುತ್ತಿರುವುದರಿಂದ ನದಿ ಪಾತ್ರಗಳಿಗೆ ಜನಜಾನುವಾರು ತೆರಳದಂತೆ ಮನವಿ ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಕೃಷ್ಣ ನದಿಗೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರು ಹರಿದುಬರುತ್ತಿದ್ದು, ಇನ್ನೂ ಅಂದಾಜು ಎರಡೂವರೆ ಲಕ್ಷದಿಂದ ಮೂರು ಲಕ್ಷ ಕ್ಯೂಸೆಕ್ ನೀರು ಬರುವವರೆಗೆ ಯಾವುದೇ ಪ್ರವಾಹ ಭೀತಿ ಇಲ್ಲ ಎಂದು ಜಮಖಂಡಿಯಲ್ಲಿ ತಹಶೀಲ್ದಾರ ಸದಾಶಿವ ಮುಕ್ಕೋಜಿ ಹೇಳಿಕೆ ನೀಡಿದ್ದಾರೆ.