Wednesday, April 9, 2025
Google search engine

Homeಸ್ಥಳೀಯಅಕ್ರಮ ಮರಳುಗಾರಿಕೆ, ವಿದ್ಯುತ್ ದರ ಏರಿಕೆ ಖಂಡಿಸಿ ತಹಶಿಲ್ದಾರ್‌ಗೆ ಮನವಿ

ಅಕ್ರಮ ಮರಳುಗಾರಿಕೆ, ವಿದ್ಯುತ್ ದರ ಏರಿಕೆ ಖಂಡಿಸಿ ತಹಶಿಲ್ದಾರ್‌ಗೆ ಮನವಿ


ಕೆ.ಆರ್.ಪೇಟೆ: ತಾಲ್ಲೋಕಿನಾದ್ಯಂತ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನೆಡೆಯುತ್ತಿದ್ದು ಹಾಡುಹಗಲಲ್ಲೆ ಮರಳು ಸಾಗಾಣಿಕೆ ಆಗುತ್ತಿರುವುದರಿಂದ ತಾಲ್ಲೋಕು ಆಡಳಿತ ಅಕ್ರಮ ಮರಳುಗಾರಿಕೆ ನೆಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಯಕರ್ನಾಟಕ ಸಂಘಟನೆಯ ತಾಲ್ಲೋಕು ಅಧ್ಯಕ್ಷ ಹೊನ್ನೇನಹಳ್ಳಿ ಸೋಮಶೇಖರ್ ನೇತೃತ್ವದಲ್ಲಿ ಮನವಿ ಮಾಡಿದರು ಏಕಾಏಕಿ ವಿದ್ಯುತ್ ದರವನ್ನು ಏರಿಕೆ ಮಾಡಿರುವ ರಾಜ್ಯ ಸರ್ಕಾರ ಕ್ರಮವನ್ನು ಖಂಡಿಸಿದ ಅವರು ತಾಲ್ಲೋಕು ಜಯಕರ್ನಾಟಕ ಸಂಘಟನೆಯ ತಾಲ್ಲೋಕು ಪದಾಧಿಕಾರಿಗಳು ಸೇರಿದಂತೆ ತಹಶಿಲ್ದಾರ್ ನಿಸರ್ಗಪ್ರಿಯರವರಿಗೆ ಮನವಿ ಸಲ್ಲಿಸಿದರು ಅಕ್ರಮಮರಳುಗಾರಿಕೆ ಮತ್ತು ವಿದ್ಯುತ್ ಬೆಲೆ ಏರಿಕೆಯನ್ನು ಕಡಿಮೆ ಮಾಡದೆ ಇದ್ದರೆ ಇನ್ನು ಮಂದೆ ಉಗ್ರಹೋರಾಟ ಮಾಡಲಾಗುವುದೆಂದು ಅಧ್ಯಕ್ಷ ಹೊನ್ನೇನಹಳ್ಳಿ
ಸೋಮಶೇಖರ್ ಹೇಳಿದರು ಸಂದರ್ಭದಲ್ಲಿ ತಾಲ್ಲೋಕು ಕಾರ್ಯಧ್ಯಕ್ಷ ಹೊನ್ನೆನಹಳ್ಳಿ ಎಸ್ ರವಿ,ಕಾರ್ಯದರ್ಶಿ ಅನುವಿನಕಟ್ಟೆ ಆನಂದ್, ಯೂತ್‌ಅಧ್ಯಕ್ಷ ಮಹೇಶ,ಯವರಾಜು ಯೋಗೇಶ,ಶಂಕರ,ರಾಕೇಶ್,ಹರೀಶ್,ಸುನಿಲ್ ಮಂಜು,ವಿಜಿಕುಮಾರ್,ಪುನೀತ್ ಸೇರಿದಂತೆ ಹಲವಾರು ಪದಾಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular