ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ತೆಲಗಿನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024 – 25 ನೇ ಸಾಲಿನ ಶಾಲಾ ಮಂತ್ರಿ ಮಂಡಲ ರಚಿಸಲಾಯಿತು.
ಮುಖ್ಯ ಶಿಕ್ಷಕ ಬಿ.ಎಸ್ ವಿಜಯ್, ಶಿಕ್ಷಕರಾದ ಬಿ.ಎಸ್ ಮಹದೇವ್, ದಿವ್ಯಶ್ರೀ, ರಮೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ರುಕ್ಮಿಣಿ ಅನಿಲ್, ಉಪಾಧ್ಯಕ್ಷೆ ರೇಖಾ ದಿವಾಕರ್, ಸಿಆರ್ ಪಿ ಮಹೇಂದ್ರ ಅವರ ಮಾರ್ಗದರ್ಶನದಲ್ಲಿ ನಡೆದ ಮಂತ್ರಿಮಂಡಲ ರಚನೆಯಲ್ಲಿ ಮುಖ್ಯಮಂತ್ರಿಯಾಗಿ ಹರ್ಷಿತ ಉಪಮುಖ್ಯಮಂತ್ರಿಯಾಗಿ ಗೌತಮ್ ತೋಟಗಾರಿಕೆ ಮಂತ್ರಿಯಾಗಿ ಹೇಮಂತ್, ಉಮೇಶ್ ಆಹಾರ ಮಂತ್ರಿಯಾಗಿ ಸೋನಿಯಾ, ಐಶ್ವರ್ಯ ನೀರಾವರಿ ಮಂತ್ರಿಯಾಗಿ ಚಂದು ಸ್ವಚ್ಛತಾ ಮಂತ್ರಿಯಾಗಿ ಪವನ್ ಕುಮಾರ್, ರಚನಾ ಶಿಕ್ಷಣ ಮಂತ್ರಿಯಾಗಿ ಸಾಕ್ಷಿ, ಚೇತನ್ ಆರೋಗ್ಯಮಂತ್ರಿಯಾಗಿ ರಾಹುಲ್, ಯಶ್ಮಿತಾ ಸಾಂಸ್ಕೃತಿಕ ಮಂತ್ರಿಯಾಗಿ ಅನುಶ್ರೀ, ಕ್ರೀಡಾ ಮಂತ್ರಿಯಾಗಿ ಚರಣ್, ಭರತ್ ಪರಿಸರ ನೈರ್ಮಲ್ಯ ಮಂತ್ರಿಯಾಗಿ ಲಕ್ಷ್ಮಿ, ದಿಗಂತ್ ವಾರ್ತಾ ಮಂತ್ರಿಯಾಗಿ ಪ್ರಣಿತ, ಖುಷಿ ಹಣಕಾಸು ಮಂತ್ರಿಯಾಗಿ ದೀಪಕ್, ಲೇಖನ ಹಾಗೂ ವಿರೋಧ ಪಕ್ಷದ ನಾಯಕನಾಗಿ ಕಿರಣ್ ಆಯ್ಕೆಯಾದರು ಹಾಗೂ ವಿವಿಧ ಇಲಾಖೆ ಮಂತ್ರಿಗಳಾಗಿ ವಿದ್ಯಾರ್ಥಿಗಳು ಆಯ್ಕೆಯಾದರು.