Friday, April 11, 2025
Google search engine

Homeದೇಶತೆಲಂಗಾಣ ವಿಶ್ವವಿದ್ಯಾಲಯದ ಉಪಕುಲಪತಿ ರವೀಂದರ್ ಗುಪ್ತಾ ಎಸಿಬಿ ಬಲೆಗೆ

ತೆಲಂಗಾಣ ವಿಶ್ವವಿದ್ಯಾಲಯದ ಉಪಕುಲಪತಿ ರವೀಂದರ್ ಗುಪ್ತಾ ಎಸಿಬಿ ಬಲೆಗೆ

ಹೈದರಾಬಾದ್: 50,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ತೆಲಂಗಾಣ ವಿಶ್ವವಿದ್ಯಾಲಯದ ಉಪಕುಲಪತಿ ದಾಚೆಪಲ್ಲಿ ರವೀಂದರ್ ಗುಪ್ತಾ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇಂದು ಬಂಧಿಸಿದೆ.

ಶನಿವಾರ ಬೆಳಗ್ಗೆ ಹೈದರಾಬಾದ್‌ ನ ತಾರ್ನಾಕಾದಲ್ಲಿರುವ ಅವರ ನಿವಾಸದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಎಸಿಬಿ ಹೇಳಿಕೆಯಲ್ಲಿ ತಿಳಿಸಿದೆ.

ಎಸಿಬಿ ಅವರ ನಿವಾಸವನ್ನು ಶೋಧಿಸಿದ್ದು, ವಾರ್ಸಿಟಿಯ ನೇಮಕಾತಿಗಳು ಮತ್ತು ಹಣಕಾಸಿನ ಬಗ್ಗೆ ವಿಚಾರಣೆ ನಡೆಸುತ್ತಿದೆ. ಇತ್ತೀಚೆಗೆ, ವಿಸಿ ರವೀಂದರ್ ಗುಪ್ತಾ ಅವರು ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲು ವ್ಯಕ್ತಿಯೊಬ್ಬರಿಂದ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಶಂಕರ್ ಎಂಬ ವ್ಯಕ್ತಿ ಎಸಿಬಿಗೆ ದೂರು ನೀಡಿ ರವೀಂದರ್ ಗುಪ್ತಾ ವಿರುದ್ಧ ದೂರು ದಾಖಲಿಸಿದ್ದರು. ಬಳಿಕ ಅಧಿಕಾರಿಗಳು ಬಲೆ ಬೀಸಿ ಅವರನ್ನು ಬಂಧಿಸಿದೆ.

ಎಸಿಬಿ ಡಿಸಿಪಿ ಸುದರ್ಶನ್ ಮಾತನಾಡಿ, ಅವು ಶಂಕರ್ ಎಂಬ ವ್ಯಕ್ತಿಯಿಂದ 50,000 ತೆಗೆದುಕೊಳ್ಳುತ್ತಿದ್ದಾಗ ನಾವು ಅವರನ್ನು ಹಿಡಿದಿದ್ದೇವೆ. ರವೀಂದರ್ ಗುಪ್ತಾ ಮನೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಆದಾಯ ಮೀರಿದ ಆಸ್ತಿಗಳ ದೃಷ್ಟಿಯಿಂದ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ. ತನಿಖೆಯ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular