ಚೆನ್ನೈ: ಹೈದರಾಬಾದ್ ನಲ್ಲಿ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಗಾಯಗೊಂಡಿದ್ದ ವಿಜಯ ರಂಗರಾಜು ಅವರನ್ನು ಚಿಕಿತ್ಸೆಗಾಗಿ ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ವಿಜಯ ರಂಗರಾಜು ಇಬ್ಬರು ಹೆಣ್ಣುಮಕ್ಕಳಾದ ದೀಕ್ಷಿತಾ ಮತ್ತು ಪದ್ಮಿನಿ ಅವರನ್ನು ಅಗಲಿದ್ದಾರೆ. ರಾಜ್ ಕುಮಾರ್ ಎಂಬುವುದು ವಿಜಯ ರಂಗರಾಜು ಅವರ ಹುಟ್ಟು ಹೆಸರು. ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆಗೆ ಮೊದಲು ಅವರು ಚೆನ್ನೈನಲ್ಲಿ ರಂಗಭೂಮಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.
ಸಾಹಸಸಿಂಹ ವಿಷ್ಣುವರ್ಧನ್, ರಜನಿಕಾಂತ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ರಂಗರಾಜನ್ ಅವರು 1994ರ ಭೈರವ ದ್ವೀಪಂ ಸಿನಿಮಾದ ಮೂಲಕ ಬಣ್ಣದ ಲೋಕ ಪ್ರವೇಶಿಸಿದ್ದರು. ವಿಜಯ ರಂಗರಾಜು ಆ ಬಳಿಕ ತೆಲುಗು ಮತ್ತು ಮಲಯಾಳಂನ ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ಖ್ಯಾತಿಯನ್ನು ಪಡೆದುಕೊಂಡಿದ್ದರು.
ಇಬ್ಬರು ಹೆಣ್ಣು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿರುವ ಅವರಿಗೆ ತೆಲುಗು ಚಿತ್ರರಂಗದ ಹಲವು ಕಲಾವಿದರು ಹಾಗೂ ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.