Sunday, July 20, 2025
Google search engine

Homeಸಿನಿಮಾತೆಲುಗು ಚಿತ್ರರಂಗದ ಖ್ಯಾತ ಖಳನಾಯಕ ಹಾಗೂ ಹಾಸ್ಯ ನಟ ಫಿಶ್ ವೆಂಕಟ್ ನಿಧನ

ತೆಲುಗು ಚಿತ್ರರಂಗದ ಖ್ಯಾತ ಖಳನಾಯಕ ಹಾಗೂ ಹಾಸ್ಯ ನಟ ಫಿಶ್ ವೆಂಕಟ್ ನಿಧನ

ತೆಲುಗು ಚಿತ್ರರಂಗದಲ್ಲಿ ಖಳನಾಯಕ ಮತ್ತು ಹಾಸ್ಯ ನಟನಾಗಿ ಹೆಸರು ಗಳಿಸಿದ್ದ ಫಿಶ್ ವೆಂಕಟ್ (ಮೂಲ ಹೆಸರು ಮಂಗಳಂಪಲ್ಲಿ ವೆಂಕಟೇಶ್) ಜುಲೈ 18ರ ರಾತ್ರಿ ನಿಧನರಾದರು. 53 ವರ್ಷದ ವೆಂಕಟ್ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.

ಮೀನು ವ್ಯಾಪಾರದಿಂದ ಜೀವನ ಪ್ರಾರಂಭಿಸಿದ ವೆಂಕಟ್, ಮುಶೀರಾಬಾದ್ ಮಾರುಕಟ್ಟೆಯಲ್ಲಿ ಮೀನು ಮಾರುತ್ತಿದ್ದ ಕಾರಣ “ಫಿಶ್ ವೆಂಕಟ್” ಎಂಬ ಹೆಸರಿನಿಂದ ಫೇಮಸ್ ಆದರು. ಶ್ರೀಹರಿ ಅವರ ಸಹಾಯದಿಂದ ಚಿತ್ರರಂಗ ಪ್ರವೇಶಿಸಿ, 100ಕ್ಕೂ ಹೆಚ್ಚು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದರು.

ಅಂತಿಮ ದಿನಗಳಲ್ಲಿ ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಅವರು ವೆಂಕಟ್‌ಗೆ ಆರ್ಥಿಕ ನೆರವು ನೀಡಿದರೂ, ಚಿಕಿತ್ಸೆ ಫಲಿಸಲಿಲ್ಲ. ‘ಆದಿ’, ‘ದಿಲ್’, ‘ಬನ್ನಿ’, ‘ಅತ್ತಾರಿಂಟಿಕಿ ದಾರೇದಿ’, ‘ಡಿಜೆ ಟಿಲ್ಲು’ ಸೇರಿದಂತೆ ಹಲವಾರು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿ ಜನಮನ ಗೆದ್ದವರು.

ಅವರ ನಿಧನಕ್ಕೆ ತೆಲುಗು ಚಿತ್ರರಂಗ ಸಂತಾಪ ಸೂಚಿಸಿದ್ದು, ಅವರ ಧೈರ್ಯ, ನಗು, ಹಾಸ್ಯಕೌಶಲ್ಯ ಸದಾ ನೆನಪಿನಲ್ಲಿ ಉಳಿಯಲಿದೆ.

RELATED ARTICLES
- Advertisment -
Google search engine

Most Popular