Monday, March 30, 2026
Google search engine

Homeಸ್ಥಳೀಯದೇವಾಲಯ ಜೀರ್ಣೋದ್ಧಾರದಿಂದ ಗ್ರಾಮಗಳಲ್ಲಿ ಸಹೋದರತ್ವ : ಶಾಸಕ ಡಿ.ರವಿಶಂಕರ್

ದೇವಾಲಯ ಜೀರ್ಣೋದ್ಧಾರದಿಂದ ಗ್ರಾಮಗಳಲ್ಲಿ ಸಹೋದರತ್ವ : ಶಾಸಕ ಡಿ.ರವಿಶಂಕರ್

ವರದಿ : ವಿನಯ್ ದೊಡ್ಡಕೊಪ್ಪಲು

ಕೆ‌.ಅರ್.ನಗರ : ಅಕ್ಷರ ದಾಸೋಹದ ಜತಗೆ ಉಚಿತ ಶಿಕ್ಷಣ ನೀಡುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಸೂತ್ತೂರು ಸೇರಿದಂತೆ ಹಲವಾರು ಮಠಗಳು ತಮ್ಮದೇ ಕೊಡುಗೆ ನೀಡಿ ಸರ್ಕಾರದ ಜೊತೆ ಕೈ ಜೋಡಿಸಿವೆ ಎಂದು‌ ಶಾಸಕ ಡಿ.ರವಿಶಂಕರ್ ಹೇಳಿದರು.

ಸೋಮವಾರ ಸಾಲಿಗ್ರಾಮ ತಾಲೂಕಿನ‌ ಮಾಯಿಗೌಡನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಮಹದೇಶ್ವರ ಜೀರ್ಣೋದ್ಧಾರಿತ ನೂತನ ದೇವಾಲಯದ ಪ್ರವೇಶೋತ್ಸವ ಮತ್ತು ನೂತನ ವಿಗ್ರಹ ಗೋಪುರದ ಬ್ರಹ್ಮ ಕಲಶ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರು ಭಾಗದಲ್ಲಿ ಹತ್ತಾರು ಶಿಕ್ಷಣ ಕೇಂದ್ರಗಳನ್ನ ಅರಂಭಿಸಿ ಲಕ್ಷಾಂತರ ಮಂದಿಗೆ ಶಿಕ್ಷಣ ಕೊಟ್ಟ ಕೀರ್ತಿ ಸೂತ್ತೂರು ಮಠಕ್ಕೆ ಸಲ್ಲಲಿದ್ದು ಇದರಿಂದ ಗ್ರಾಮಾಂತರ ಪ್ರದೇಶದ ಮಕ್ಕಳು ರಾಜ್ಯ , ದೇಶ, ವಿದೇಶದಲ್ಲಿ ಉದ್ಯೋಗ ದೊರೆಯಲು ಸೂತ್ತೂರು ಶ್ರೀಗಳ ದೂರ ದೃಷ್ಠಿಯೇ ಕಾರಣ ವಾಗಿದೆ ಎಂದು ಹೇಳಿದರು.

ಗ್ರಾಮಗಳಲ್ಲಿ ದೇವಸ್ಥಾನಗಳನ್ನ ನಿರ್ಮಾಣ ಮತ್ತು ಜೀರ್ಣೋದ್ಧಾರ ಮಾಡುವುದರಿಂದ ಎಲ್ಲಾ ಸಮುದಾಯಗಳ ನಡುವೆ ಸಹೋದರತ್ವ ನಿರ್ಮಾಣವಾಗಿ ಗ್ರಾಮಗಳಲ್ಲಿ ಶಾಂತಿ ನೆಲಸಲು ಸಾಧ್ಯವಾಗಲಿದ್ದು ಮಹದೇಶ್ವರ ದೇವಾಲಯದ ರಕ್ಷಣೆಗೆ ತಡೆಗೋಡೆ ನಿರ್ಮಿಸಲು 60 ಲಕ್ಷ ರೂ ಅನುಧಾನವನ್ನು ನೀಡಿರುವುದಾಗಿ ತಿಳಿಸಿದರು.

ಸೂತ್ತೂರು ವೀರಸಿಂಹಾಸನ ಮಹಾ ಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಆರ್ಶಿವಚನ ನೀಡಿದರೇ ದೇವಾಲಯದ ಕಳಸಾರೋಹಣವನ್ನು ಸಿದ್ದಗಂಗಾ ಮಠದ ಸಿದ್ದಗಂಗಾ ಶ್ರೀಗಳು ಮಾಡಿದರು.

   ಕಾರ್ಯಕ್ರಮದ ಸಾನಿಧ್ಯವನ್ನ ಬೆಟ್ಟದಪುರದ ಸಲೀಲಾಖ್ಯ ಮಠದ ಚೆನ್ನಬಸವದೇಶಿ ಕೇಂದ್ರ ಶ್ರೀ, ಗಾವಡಗೆರೆ ಜಂಗಮ ಮಠದ ನಟರಾಜ ಶ್ರೀ,ರಾವಂದೂರು ಮುರುಘ ಮಠದ ಮೋಕ್ಷಪತಿ ಶ್ರೀ, ಉಕ್ಕಿನಕಂತೆ ಮಠದ ಸಾಂಬಸದಾಶಿವ ಶ್ರೀ,ಈಶಾನೇಶ್ವರ ಮಠದ ಬಸವರಾಜ ಶ್ರೀ, ಬಸವ ಕಲ್ಯಾಣ ಮಠದ ವಿಜಯ ಕುಮಾರ ಶ್ರೀ ಸಾನಿಧ್ಯ ವಹಿಸಿದ್ದರು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ.ಎ.ಎಸ್ ಅಧಿಕಾರಿ ಡಿ‌.ಭಾರತಿ ವಹಿಸಿ ಮಾತನಾಡಿ ಸನ್ಮಾನ ಸ್ವೀಕರಿಸದರು. 

    ಈ ಸಂದರ್ಭದಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ದೊಡ್ಡಸ್ವಾಮೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ತೋಂಟದಾರ್ಯ, ವಕೀಲ ಎಚ್.ಪಿ.ಮಹದೇವಪ್ಪ, ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ , ಪ್ರಾಂಶುಪಾಲ ಶ್ರೀನಿವಾಸ್,ಮಾಜಿ ಗ್ರಾ.ಪಂ.ಸದಸ್ಯ ಆಶಿ ಮಲ್ಲಿಕಾರ್ಜುನ, ಬಸವ ಕಿರಣ , ರಘು, ಶಿವನಂದ್, ಅಂಕನಹಳ್ಳಿ ಯತೀಶ್, ಎಂ.ಎನ್‌.ಮಹದೇವ ,ದಶರಥ,ಷಣ್ಮು ಅಂಕನಹಳ್ಳಿ
ಪವನ್,ಹರೀಶ್ ರಾಜೇಂದ್ರ, ಸೋಮಶೇಖರಪ್ಪ,ರಾಜಣ್ಣ, ಎಪಿ ಹರೀಶ್, ಯಾಚನಹಳ್ಳಿ ವಿಜಯ್, ಚೇತನಮೈಸೂರು, ರುದ್ರೇಶ ಅಂಕನಹಳ್ಳಿ, ಹಾಡ್ಯ ಮಲ್ಲಿಕಾ,ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular