Wednesday, May 14, 2025
Google search engine

Homeರಾಜ್ಯಉದ್ವಿಗ್ನ ಪರಿಸ್ಥಿತಿ: ಸಿಎ ಪರೀಕ್ಷೆ ಮುಂದೂಡಿಕೆ

ಉದ್ವಿಗ್ನ ಪರಿಸ್ಥಿತಿ: ಸಿಎ ಪರೀಕ್ಷೆ ಮುಂದೂಡಿಕೆ

ನವದೆಹಲಿ: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು (ಐಸಿಎಐ) ಮೇ 9ರಿಂದ 14ರ ವರೆಗೆ ಹಮ್ಮಿಕೊಂಡಿದ್ದ ಅಂತಿಮ ಸಿಎ, ಸಿಎ ಮಧ್ಯಂತರ (ಇಂಟರ್‌ಮೀಡಿಯೆಟ್‌) ಮತ್ತು ಮೌಲ್ಯಮಾಪನ ಪರೀಕ್ಷೆಯನ್ನು ಮುಂದೂಡಲಾಗಿದೆ. ದೇಶದಲ್ಲಿ ತಲೆದೋರಿರುವ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪರಿಷ್ಕೃತ ಪರೀಕ್ಷಾ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ. 55,666 ವಿದ್ಯಾರ್ಥಿಗಳು ಅಂತಿಮ ಪರೀಕ್ಷೆ ಹಾಗೂ 1.02 ಲಕ್ಷ ವಿದ್ಯಾರ್ಥಿಗಳು ಸಿಎ ಮಧ್ಯಂತರ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು.

RELATED ARTICLES
- Advertisment -
Google search engine

Most Popular