ಗುಂಡ್ಲುಪೇಟೆ: ತೆರಕಣಾಂಬಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಗ್ರಾಮ ಪಂಚಾಯಿತಿ ವತಿಯಿಂದ ಶಾಲೆಗೆ 15ನೇ ಹಣಕಾಸು ಅನುದಾನದಲ್ಲಿ ವಿವಿಧ ಚಿತ್ರಪಟಗಳನ್ನು ಕೊಡುಗೆಯಾಗಿ ನೀಡಲಾಯಿತು.
ಈ ವೇಳೆ ತೆರಕಣಾಂಬಿ ಗ್ರಾಪಂ ಅಧ್ಯಕ್ಷ ಪಿಡಿಓ ಮಹದೇವಸ್ವಾಮಿ ಮಾತನಾಡಿ, ಗ್ರಾಮ ಪಂಚಾಯಿತಿ ವತಿಯಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 15ನೇ ಹಣಕಾಸು ಅನುದಾನದಲ್ಲಿ 60 ಸಾವಿರ ರೂ. ಮೌಲ್ಯದ 30 ವಿವಿಧ ರೀತಿಯ ಚಿತ್ರಪಟಗಳನ್ನು ನೀಡಲಾಗಿದೆ. ಸ್ಥಳೀಯ ಸಂಪನ್ಮೂಲದಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಯಾವಾಗಲೂ ಧನಾತ್ಮಕ ವಿಷಯಗಳನ್ನು ಆಲೋಚಿಸುವುದ ಅರಿಯಲು ಇವು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕಲಿಕೆಗೆ ಪೂರಕವಾದ ಮಾಹಿತಿ ಆಧಾರಿತ ಈ ಚಿತ್ರಪಟಗಳು ಮಕ್ಕಳಲ್ಲಿ ವಿದ್ಯಾಭ್ಯಾಸಮಾಡಲು ಪ್ರೇರೇಪಣೆ ನೀಡುತ್ತವೆ. ಇದನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಂಡು ಹೆಚ್ಚಿನ ಜ್ಞಾನ ಪಡೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತೆರಕಣಾಂಬಿ ಗ್ರಾಪಂ ಅಧ್ಯಕ್ಷರಾದ ಭಾಗ್ಯಮ್ಮ, ಪ್ರಾಂಶುಪಾಲರಾದ ಮಹದೇವಪ್ರಸಾದ್, ಶಿಕ್ಷಕರಾದ ಮಂಜನಾಥ್, ಮಮ್‍ತಾಜ್ ಧರ್ಮೇಶ್ ಸೇರಿದಂತೆ ಸಿಬ್ಬಂದಿ ವರ್ಗದವರು, ಮಕ್ಕಳು ಹಾಜರಿದ್ದರು.