ನ್ಯೂಯಾರ್ಕ್: ಅಮೆರಿಕಾದ ಮುಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಲೀಕತ್ವದ ಹೋಟೆಲ್ ಹೊರಗೆ ಟೆಸ್ಲಾ ಸೈಬರ್ ಟ್ರಕ್ ಸ್ಫೋಟಗೊಂಡಿದೆ. ಇಂದು ಬೆಳಗ್ಗೆ ಲಾಸ್ ವೇಗಾಸ್‌ನಲ್ಲಿರೋ ಟ್ರಂಪ್ ಹೋಟೆಲ್ ಮುಂದೆ ನಡೆದ ಈ ದುರಂತದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಈ ಸಂಬಂಧ ಮಾತಾಡಿದ ಲಾಸ್ ವೇಗಾಸ್ ಶೆರಿಫ್ ಕೆವಿನ್ ಮೆಕ್‌ಮಹಿಲ್ ಅವರು, ಟೆಸ್ಲಾ ಸೈಬರ್ ಟ್ರಕ್ ಸ್ಫೋಟಕ್ಕೂ ಮೊದಲು ಟ್ರಂಪ್ ಇಂಟರ್ನ್ಯಾಷನಲ್ ಹೋಟೆಲ್ ಗೇಟ್ ಬಳಿ ಬಂದಿದೆ. ಹೋಟೆಲ್ ಗೇಟ್ ಮುಂದೆಯೇ ಸೈಬರ್ ಟ್ರಕ್ ನಿಲ್ಲಿಸಲಾಗಿತ್ತು. ಈ ಟ್ರಕ್ಗೆ ಮೊದಲು ಬೆಂಕಿ ಹೊತ್ತಿಕೊಂಡು ನಂತರ ಸ್ಫೋಟ ಸಂಭವಿಸಿದೆ ಎಂದಿದ್ದಾರೆ.
ಒಂದು ಸಾವು ಮತ್ತು ಹಲವರಿಗೆ ಗಾಯ
ಸೈಬರ್ ಟ್ರಕ್‌ನೊಳಗಿದ್ದ ಮ್ಯಾಕ್ ಮಹಿಲ್ ಅನ್ನೋ ವ್ಯಕ್ತಿ ಮೃತಪಟ್ಟಿದ್ದಾನೆ. ಇಷ್ಟೇ ಅಲ್ಲ ಜತೆಗೆ 7 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರೋ ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್, ಟ್ರಕ್ನಲ್ಲಿ ದೊಡ್ಡ ಪಟಾಕಿಗಳನ್ನು ಸಾಗಿಸಲಾಗುತ್ತಿತ್ತು. ಹಾಗಾಗಿ ಇದರಿಂದ ಸ್ಫೋಟ ಸಂಭವಿಸಿದೆ. ಇದು ಟ್ರಕ್‌ನಿಂದ ಉಂಟಾದ ಸಮಸ್ಯೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯ ಅಮೆರಿಕ ಪೊಲೀಸರು ಟ್ರಕ್ ಸ್ಫೋಟದ ಬಗ್ಗೆ ಕೇಸ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.