ವರದಿ: ಎಡತೊರೆ ಮಹೇಶ್
ಎಚ್ ಡಿ ಕೋಟೆ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ಕೇಂದ್ರ ಹಾಗೂ ಆಹಾರ ಸುರಕ್ಷತಾ ಅಧಿಕಾರಿ ಸರಗೂರು/ ಹೆಚ್ ಡಿ ಕೋಟೆ ಸಹಯೋಗದೊಂದಿಗೆ ಇಂದು ಹೆಚ್ ಡಿ ಕೋಟೆ ಪಟ್ಟಣದ ಡಾ.ಬಿ ಆರ್ ಅಂಬೇಡ್ಕರ್ ಭವನದಲ್ಲಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೋಕು ದಂಡಾಧಿಕಾರಿಗಳಾದ ಶ್ರೀನಿವಾಸ್ ಅವರು ಜೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ತಾಲೋಕು ದಂಡಾಧಿಕಾರಿಗಳಾದ ಶ್ರೀನಿವಾಸ್ ಮಾತನಾಡಿ, ಹೆಚ್ ಡಿ ಕೋಟೆ ಮತ್ತು ಸರಗೂರು ತಾಲ್ಲೂಕಿನ ಎಲ್ಲಾ ಬೇಕರಿ ಮಾಲೀಕರು, ಚಿಲ್ಲರೆ ಅಂಗಡಿ ಮಾಲೀಕರು, ಹೋಟೆಲ್ ಗಳ ಮಾಲೀಕರು, ಹಾಗೂ ತಾಲೋಕಿನೋಳಗೆ ಆಹಾರ ತಯಾರಿಸಿ ಮಾರುವ ಎಲ್ಲಾ ಮಾಲೀಕರುಗಳಿಗೆ, ತಾಲೋಕಿನಲ್ಲಿ ಉತ್ತಮವಾಗಿ ಹಾಗೂ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡಬೇಕು. ಎಲ್ಲರೂ ಕಡ್ಡಾಯವಾಗಿ, Fssa ನೊಂದಣಿ ಮಾಡಿಸಿಕೊಳ್ಳಬೇಕಾಗಿ ಕರೆನೀಡಿ, ದೇವಸ್ಥಾನ, ಜಾತ್ರೆಗಳಲ್ಲಿ, ಪ್ರಸಾದ ಮತ್ತು ಅನ್ನಸಂತರ್ಪಣೆ ಮಾಡುವ ಸಂದರ್ಭದಲ್ಲಿ ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಒಳಪಡಿಸಬೇಕೇಂದು ಕರೆನೀಡಿದರು.
ತದನಂತರ ತಾಲೋಕು ಆರೋಗ್ಯಾಧಿಕಾರಿಗಳಾದ ಡಾ.ರವಿಕುಮಾರ್ ಅವರು ಮಾತನಾಡಿ, ಆಹಾರ ಸುರಕ್ಷತಾ ಕಾಯ್ದೆ2006 ಅಡಿಯಲ್ಲಿ ಎಲ್ಲಾ ಮಾಲೀಕರು ಕಡ್ಡಾಯವಾಗಿ ಆಹಾರ ಸುರಕ್ಷತಾ ಅಧಿಕಾರಿಗಳಿಂದ ಪರವಾನೆ ಪಡೆಯಬೇಕು ಮತ್ತು ಪರವಾನೆಯಲ್ಲಿ ವರ್ಷಕ್ಕೆ 12 ಲಕ್ಷ ವೈವಾಟುಗಳಿಗಿಂತ ಕಡಿಮೆ ಇರುವವರು ನೋಂದಣಿ ಮಾಡಿಸಿಕೊಳ್ಳಬೇಕು ಮತ್ತು 12 ಲಕ್ಷಕ್ಕಿಂತ ಹೆಚ್ಚು ವೈವಾಟು ಇರುವವರು,ಲೈಸನ್ಸ್ ಪಡೆಯಬೇಕು. ಎಲ್ಲಾ ಅಂಗಡಿ ಮುಗ್ಗಟ್ಟುಗಳು,ಬೇಕರಿಗಳಲ್ಲಿ ಸುಚಿತ್ವ ಕಾಪಾಡಬೇಕು, ಕಲಬೆರಕೆ ಆಗದಂತೆ ಗ್ರಾಹಕರಿಗೆ ಉತ್ತಮವಾದ ಆಹಾರ ಪದಾರ್ಥಗಳನ್ನು ನೀಡಬೇಕು ಮತ್ತು ಎಲ್ಲಾ ಪದಾರ್ಥಗಳ ಮೇಲೆ ಆಹಾರ ತಯಾರಿಸಿದ ದಿನಾಂಕ, ಅವಧಿ ಮುಗಿಯುವ ದಿನಾಂಕ, ಹಾಗೂ 14 ಅಂಕಿಇರುವ Fssai ಪರವಾನೆಯ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ತಿಳಿಸಿದರು.
ತಾಲೋಕಿನ ಎಲ್ಲಾ ಬಿಸಿಊಟದ ಶಾಲೆಗಳು, ಅಂಗನವಾಡಿಗಳು, ಹಾಸ್ಟೆಲ್ ಗಳು, ಆಶ್ರಮಶಾಲೆಗಳು, ಎಲ್ಲರೂ ಕಡ್ಡಾಯವಾಗಿ FSSAI ಪ್ರವಾನೆಯನ್ನು ನೊಂದಾಯಿಸಿಕೊಳ್ಳಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಾ. ರವಿಕುಮಾರ್ ಆಹಾರ ಸುರಕ್ಷತಾಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಸೋಮಣ್ಣ, ಯಶವಂತ್, ಕಾರ್ಯಕ್ರಮದ ಉಪನ್ಯಾಸಕರು, ಸರಗೂರು ಮತ್ತು ಹೆಚ್ ಡಿ ಕೋಟೆ ತಾಲೋಕಿನ ಎಲ್ಲಾ ಆಹಾರ ವಹಿವಾಟುದಾರರು, ವರ್ತಕರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು.
ತರಬೇತಿಯನ್ನು ನೀಡಿ ಎಲ್ಲರಿಗೂ ತರಬೇತಿ ಪ್ರಮಾಣ ಪತ್ರವನ್ನು ನೀಡಿದರು. Fostoc ಆಯೋಜಿಸಿದ್ದ ರಶ್ಮಿ ಹಾಗೂ ರಾಘವೇಂದ್ರಸ್ವಾಮಿ ಇನ್ನಿತರರು ಹಾಜರಿದ್ದರು.