Thursday, May 14, 2026
Google search engine

Homeಕ್ರೀಡೆಥೈಲ್ಯಾಂಡ್ ಓಪನ್ 2026: ಸಾತ್ವಿಕ್-ಚಿರಾಗ್ ಜೋಡಿಗೆ ಜಯ

ಥೈಲ್ಯಾಂಡ್ ಓಪನ್ 2026: ಸಾತ್ವಿಕ್-ಚಿರಾಗ್ ಜೋಡಿಗೆ ಜಯ

ಬ್ಯಾಂಕಾಕ್‌ : ಬ್ಯಾಂಕಾಕ್‌ ನ ನಿಮಿಬುತ್ರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಥೈಲ್ಯಾಂಡ್ ಓಪನ್ 2026 ರೌಂಡ್ ಆಫ್ 32 ಪಂದ್ಯದಲ್ಲಿ ಭಾರತದ ಸ್ಟಾರ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಶುಭಾರಂಭ ಮಾಡಿದ್ದಾರೆ.

ಅಗ್ರ ಶ್ರೇಯಾಂಕಿತ ಸಾತ್ವಿಕ್-ಚಿರಾಗ್ ಜೋಡಿಯು ಇಂಡೋನೇಷ್ಯಾದ ಪುತ್ರ ಎರ್ವಿಯಾನ್ಸ್ಯಾ ಮತ್ತು ಬಾಗಾಸ್ ಮೌಲಾನಾ ವಿರುದ್ಧ 21-19, 21-23, 21-10 ಸೆಟ್‌ಗಳಿಂದ ಜಯಗಳಿಸಿದರು.

ಮೊದಲ ಗೇಮ್‌ನಲ್ಲಿ 11-16 ರಿಂದ ಹಿನ್ನಡೆಯಲ್ಲಿದ್ದರೂ, ಸತತ 7 ಅಂಕಗಳನ್ನು ಗಳಿಸಿ ಭಾರತೀಯ ಜೋಡಿ ತಿರುಗೇಟು ನೀಡಿತು. ಎರಡನೇ ಗೇಮ್ ಕೈತಪ್ಪಿದರೂ, ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿ 1 ಗಂಟೆ 4 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದುಕೊಂಡರು.

ರೌಂಡ್ ಆಫ್ 16 ರಲ್ಲಿ ಇವರು ಮಲೇಷ್ಯಾದ ಗೂಂಟಿಂಗ್ ಬ್ರಯನ್ ಜೆರೆಮಿ ಮತ್ತು ಹೈಕಲ್ ಮುಹಮ್ಮದ್ ಜೋಡಿಯನ್ನು ಎದುರಿಸಲಿದ್ದಾರೆ.

RELATED ARTICLES
- Advertisment -
Google search engine

Most Popular