Monday, April 21, 2025
Google search engine

Homeಸ್ಥಳೀಯಸಂಸ್ಕಾರಯುತ ಜೀವನ ಅಗತ್ಯ: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ

ಸಂಸ್ಕಾರಯುತ ಜೀವನ ಅಗತ್ಯ: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ

ಮೈಸೂರು: ಸಂಸ್ಕಾರಯುತಜೀವನ ನಡೆಸುವುದೇ ಬದುಕಿನಧ್ಯೇಯವಾಗಬೇಕು ಎಂದು ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ರವರು ಊಟಿಯ ತೀಟಕಲ್‌ನ ಜೆಎಸ್‌ಎಸ್ ಪಬ್ಲಿಕ್ ಶಾಲಾ ಆವರಣದಲ್ಲಿ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಜೆಎಸ್‌ಎಸ್ ಮಹಾವಿದ್ಯಾಪೀಠ ಹಾಗೂ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಗಳ ಸಂಯುಕ್ತಾಶ್ರಯದಲ್ಲಿಪರಮಪೂಜ್ಯಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದದಿಂದ ಸಾರ್ವಜನಿಕರಿಗಾಗಿ ನಡೆಯುತ್ತಿರುವಜೀವನೋತ್ಸಾಹ ಶಿಬಿರದ ಕೊನೆಯ ದಿನಮೇ ೪ ಶನಿವಾರದಂದು ಸಂಸ್ಕಾರಯುತ ಜೀವನ ಕುರಿತು ಉಪನ್ಯಾಸ ನೀಡಿ ಸಮಾರೋಪ ನುಡಿಗಳನ್ನಾಡುತ್ತಾ ತಿಳಿಸಿದರು.

ಭಗವಂತ ಸೃಷ್ಠಿಸಿದ ಪ್ರಕೃತಿಯಸಂಪತ್ತನ್ನುಇತಿಮಿತಿಯೊಂದಿಗೆಬಳಸಿಕೊಳ್ಳಬೇಕು.ಅತಿ ಆಸೆ ಬದುಕಿಗೆ ಒಳ್ಳೆಯದಲ್ಲ. ನೀತಿವಂತರಾಗಿ, ದಯಾಗುಣವಂತರಾಗಿ ಹಾಗೂ ಸಂಸ್ಕಾರವಂತರಾಗಿಜೀವನ ಸಾಗಿಸಬೇಕು.ನಮ್ಮಲ್ಲಿರುವ ಅರಿಷಡ್ವರ್ಗಗಳನ್ನು ದಮನಮಾಡಬೇಕು.ಸಾತ್ವಿಕ ಗುಣಗಳನ್ನು ಅಳವಡಿಸಿಕೊಂಡು ಸತ್ಸಂಗವನ್ನು ಮಾಡುತ್ತಾ ಸುಂದರ ಬದುಕನ್ನು ಹೊಂದಬೇಕು.ಇಂತಹ ಶಿಬಿರಗಳು ನಮ್ಮ ಬದುಕಿನಲ್ಲಿ ಸಕಾರಾತ್ಮ್ಮಕಭಾವನೆಗಳನ್ನು ಮೂಡಿಸುತ್ತವೆ. ಸುತ್ತೂರು ಪರಮಪೂಜ್ಯ ಜಗದ್ಗುರುಗಳವರ ದೂರದೃಷ್ಟಿಯ ಫಲವಾಗಿ ಇಂತಹ ಕಾರ್ಯಕ್ರಮಗಳು ರೂಪುಗೊಳ್ಳುತ್ತಿವೆ. ಈ ಶಿಬಿರದಲ್ಲಿ ಪಾಲ್ಗೊಂಡಿರುವ ನೀವೆ ಪುಣ್ಯವಂತರುಎಂದುಹೇಳಿದರು.

ಹೆಚ್.ಕೆ.ಬಸವಣ್ಣನವರು ಶಿಬಿರದ ವರದಿಯನ್ನುಮಂಡಿಸಿದರು.ಶಿಬಿರಾರ್ಥಿಗಳಾದ ಬಳ್ಳಾರಿಯ ಶ್ರೀಮತಿ ಶಕುಂತಲಾರೆಡ್ಡಿ, ಬೆಳಗಾವಿಯ ಶ್ರೀ ವಿವೇಕ ಪತ್ತಾರ್, ಬೆಂಗಳೂರಿನ ಶ್ರೀಮತಿ ವಿಜಯಾ ದಿವಾಕರ್, ಬಾಗಲಕೋಟೆಯಶ್ರೀ ಸುರೇಶ್ ಹಿರೇಮಠ್, ವಿಜಯಪುರದ ಶ್ರೀಮತಿ ಕಮ ತೆಟಿ, ಮಹಾರಾಷ್ಟ್ರದ ಸಾಂಗ್ಲಿಯ ಶ್ರೀಮತಿ ವಿಜಯಾ ಬಿಜ್ಜರಗಿಹಾಗೂ ಗೋಕಾಕ್‌ನ ಶ್ರೀ ರಾಮಚಂದ್ರಕಾಕಡೆ ಶಿಬಿರದ ಬಗ್ಗೆ ಅವರ ಅನಿಸಿಕೆಗಳನ್ನು ಹಂಚಿಕೊಂಡರು.

ಶಿಬಿರದಲ್ಲಿ ೨೩೩ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಜಯಶ್ರೀ ನಾಯಕ್ ಪ್ರಾರ್ಥನೆ ಮಾಡಿದರು.ಡಾ. ಎಸ್. ಹೇಮಂತ್‌ಕುಮಾರ್ ಸ್ವಾಗತಿಸಿದರು. ಎಂ.ಎಸ್. ಪ್ರಜ್ವಲ್ ವಂದಿಸಿದರು. ಪುಷ್ಪ ಕಾಶೀನಾಥ್‌ರವರು ಕಾರ್ಯಕ್ರಮ ನಿರೂಪಿಸಿದರು.


RELATED ARTICLES
- Advertisment -
Google search engine

Most Popular