ಯಳಂದೂರು ಜು ೩೧ : ತಾಲ್ಲೂಕಿನ ಕಟ್ನವಾಡಿ-ಕಿನಕಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ಸದಸ್ಯರ ಚುನಾವಣೆ ನಿಗದಿಯಾಗಿದ್ದು, ಆಗಸ್ಟ್ ೧೧ರ ಶುಕ್ರವಾರ ಬೆಳಗ್ಗೆ ೯ ರಿಂದ ಮದ್ಯಾಹ್ನ ೨ ಗಂಟೆಯವರೆಗೆ ಚುನಾವಣಾ ಪ್ರಕ್ರಿಯೆ ನಡೆಯಲಿದೆ ಎಂದು ರಿಟರ್ನಿಂಗ್ ಆಫೀಸರ್ ಹಾಗೂ ಯಳಂದೂರು ತಾಲ್ಲೂಕು ಸಹಕಾರ ಅಭಿವೃದ್ದಿ ಅಧಿಕಾರಿ ಸುಭಾಷಿಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ಈ ಬಗ್ಗೆ ಮಾಹಿತಿ ನೀಡಿ ಮಾತನಾಡುತ್ತಾ ಸಾಮಾನ್ಯ ಚುನಾವಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು, ಚಾಮರಾಜನಗರ ಜಿಲ್ಲೆ ಇವರ ಆದೇಶ ಸಂಖ್ಯೆ : ಡಿಆರ್‌ಸಿಎಸ್/ಚುನಾವಣೆ/ಆಮಂಚು/೩೬/೨೦೨೩-೨೪ ರನ್ವಯ ಸಹಕಾರ ಅಭಿವೃದ್ದಿ ಅಧಿಕಾರಿಯಾದ ತಮ್ಮನ್ನು ರಿಟರ್ನಿಂಗ್ ಆಫೀಸರ್ ಆಗಿ ನೇಮಿಸಲಾಗಿದ್ದು, ಸದರಿ ಆದೇಶದನ್ವಯ ಮುಂದಿನ ಐದು ವರ್ಷಗಳ ಅವಧಿಗೆ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರುಗಳ ಸಾಮಾನ್ಯ ಚುನಾವಣೆಯನ್ನು ಕಟ್ನವಾಡಿ ಕಿನಕಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಕಛೇರಿಯಲ್ಲಿ ದಿನಾಂಕ ೧೧ ಆಗಸ್ಟ್ ೨೦೨೩ರ ಶುಕ್ರವಾರ ಬೆಳಗ್ಗೆ ೯ ಗಂಟೆಯಿ0ದ ಮದ್ಯಾಹ್ನ ೨ ಗಂಟೆಯವರೆಗಗೆ ನಡೆಸಲು ಆದೇಶ ನೀಡಲಾಗಿದೆ. ಆಕಾಂಕ್ಷೆಯುಳ್ಳ ಅಭ್ಯರ್ಥಿಗಳು ೦೨ ಆಗಸ್ಟ್ ೨೦೨೩ ರಿಂದ ೦೩ ಆಗಸ್ಟ್ ೨೦೨೩ರ ಬೆಳಗ್ಗೆ ೧೧ರಿಂದ ಮದ್ಯಾಹ್ನ ೩ ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಆಗಸ್ಟ್ ೦೪ ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಆಗಸ್ಟ್ ೦೫ರಂದು ನಾಮಪತ್ರ ವಾಪಸ್ ಪಡೆಯಲು ಅವಕಾಶವಿದ್ದು, ಅಂದೇ ಮದ್ಯಾಹ್ನ ಕ್ರಮಬದ್ದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ನಂತರ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ವಿತರಿಸಲಾಗುವುದು. ನಂತರ ಸಂಘದ ಆವರಣದಲ್ಲಿ ದಿನಾಂಕ ೧೧ ಆಗಸ್ಟ್ ೨೦೨೩ರಂದು ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮತ ಎಣ ಕೆಯ ನಂತರ ಚುನಾವಣ ಫಲಿತಾಂಶ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಘದ ಕಛೇರಿಯನ್ನು ಸಂಪರ್ಕಿಸುವoತೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.