ರಾಮನಗರ : ರಾಮನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿಆ. ೧೦ರ ಗುರುವಾರ ಉಚಿತ ನೇರ ಸಂದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ.
ನೇರ ಸಂದರ್ಶನ ಕಾರ್ಯಕ್ರಮದಲ್ಲಿ ಖಾಸಗಿ ಸಂಸ್ಥೆಯಾದ ಕಾವೇರಿ ಅಭ್ಯುದ್ಯ ಪ್ರತಿಷ್ಠಿತ ಟ್ರಸ್ಟ್ (ರಿ), ಮೈಸೂರು ರವರು ಭಾಗವಹಿಸುತ್ತಿದ್ದು, ಆಶೀರ್ವಾದ್ ಮಾಂಟೇಸರಿ ಸ್ಕೂಲ್ ಟೀರ‍್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ವಿಜನಯನಗರ ಮೈಸೂರಿನಲ್ಲಿ ಖಾಲಿ ಇರುವ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಉಪನ್ಯಾಸಕಿಯರು, ಅಕೌಂಟೆoಟ್, ಪಬ್ಲಿಕ್ ರಿಲೇಷನ್ ಆಫೀಸರ್, ಅಡ್ಮಿನಿಸ್ಟ್ರೇಟಿವ್, ಅಟೆಂಡರ್ & ಆಯಾ ಹುದ್ದೆಗೆಎಸ್‌ಎಸ್‌ಎಲ್‌ಸಿ, ಪಿಯುಸಿ, ಯಾವುದೇ ಪದವಿ, ಎಂಎಸ್‌ಸಿ, ಬಿಇಡಿ, ಎಂಬಿಎ, ಎಂಕಾಮ್, ಎಂಸಿಎವಿದ್ಯಾರ್ಹತೆ ಹೊಂದಿರುವ ೨೧ ರಿಂದ ೩೫ ವರ್ಷ ವಯಸ್ಸುಳ ಮಹಿಳಾ ಉದ್ಯೋಗಾಂಕ್ಷಿಗಳನ್ನು ಮಾತ್ರ ನೇಮಕಾತಿ ಮಾಡಿಕೊಳ್ಳಲ್ಲಿದ್ದು, ಆಸಕ್ತಿಯುಳ್ಳ ಮಹಿಳಾ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ/ರೆಸ್ಯೂಮ್ (ಬಯೋಡೇಟಾ), ಇತ್ಯಾದಿ ದಾಖಲೆಗಳೊಂದಿಗೆ ಆ. ೧೦ರ ಗುರುವಾರ ಬೆಳಿಗ್ಗೆ ೧೦.೩೦ಕ್ಕೆ ಜಿಲ್ಲಾ ಕೌಶಲ್ಯ ಕೇಂದ್ರ/ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಪ್ರಕಾಶ್‌ಚಂದ್ರ ಕಾಂಪ್ಲೆಕ್ಸ್, ಕೆ.ಎಸ್.ಅರ್.ಟಿ.ಸಿ ಡಿಪೋ ಎದುರು ಬಿ.ಎಂ.ರಸ್ತೆ. ರಾಮನಗರ ಇಲ್ಲಿ ನಡೆಸುವ ನೇರ ಸಂದರ್ಶನ ಕಾರ್ಯಕ್ರಮಕ್ಕೆ ಹಾಜರಾಗಿ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆದೂ.ಸಂಖ್ಯೆ: ೦೮೦-೨೭೨೭೩೩೬೪, ೯೬೬೩೫೧೧೪೧೮, ೯೯೦೦೩೩೧೭೭೯ &೯೯೬೪೭೮೪೧೭೮ ಅನ್ನು ಸಂಪರ್ಕಿಸುವoತೆ ರಾಮನಗರಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.