Sunday, April 20, 2025
Google search engine

Homeಅಪರಾಧಜೈಲಿನ ಗೋಡೆ ಜಿಗಿದು ಪರಾರಿಯಾಗಿದ್ದ ಆರೋಪಿ ಸೆರೆ

ಜೈಲಿನ ಗೋಡೆ ಜಿಗಿದು ಪರಾರಿಯಾಗಿದ್ದ ಆರೋಪಿ ಸೆರೆ

ದಾವಣಗೆರೆ: ಅತ್ಯಾಚಾರ ಪ್ರಕರಣದಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಆರೋಪಿಯೋರ್ವ ಜೈಲಿನಿಂದ ಪರಾರಿಯಾಗಿರುವ ಘಟನೆ ಕಳೆದ ದಿನ ಶನಿವಾರ ಸಂಜೆ ನಡೆದಿತ್ತು. ಆದರೆ ಇದೀಗ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ವಸಂತ (೨೩) ಜೈಲಿನಿಂದ ಪರಾರಿಯಾಗಿದ್ದ ಆರೋಪಿ.

ದಾವಣಗೆರೆ ನಗರದ ಉಪಕಾರಾಗೃಹದ ಗೋಡೆ ಜಿಗಿದು ಪರಾರಿಯಾದ ಆರೋಪಿ ವಸಂತ್‌ನನ್ನು ಹಿಡಿಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ದಾವಣಗೆರೆ ನಗರದ ಹೊರವಲಯದ ಕರೂರು ಪ್ರದೇಶದ ನಿವಾಸಿ ವಸಂತ ವೃತ್ತಿಯಿಂದ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಸಂತ್ ವಿರುದ್ಧ ಕಳೆದ ಎರಡು ದಿನಗಳ ಹಿಂದೆ ದಾವಣಗೆರೆ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು.

ದೂರು ದಾಖಲಾದ ಹಿನ್ನೆಲೆಯಲ್ಲಿ ಮಹಿಳಾ ಠಾಣೆಯ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ ಕಳೆದ ಶನಿವಾರ ಉಪ ಕಾರಾಗೃಹದ ಗೋಡೆ ಜಿಗಿದು ಆರೋಪಿ ವಸಂತ್ ಪರಾರಿಯಾಗಿದ್ದ. ಜಿಗಿದ ಪರಿಣಾಮ ಆರೋಪಿ ಕಾಲಿಗೆ ಪೆಟ್ಟಾಗಿತ್ತು, ಆದರೂ ಅದನ್ನು ಲೆಕ್ಕಿಸದೇ ಪರಾರಿಯಾಗಿದ್ದ. ಇದಾದ ಕೆಲ ಹೊತ್ತಿನ ನಂತರ ಜೈಲ್ ಸಿಬ್ಬಂದಿಗೆ ಮಾಹಿತಿ ತಿಳಿದಿದ್ದು, ಆರೋಪಿಯನ್ನು ಹುಡುಕಿದರು ಕೂಡ ಪತ್ತೆಯಾಗಿರಲಿಲ್ಲ. ಇದರ ಸಂಬಂಧ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಜೈಲಿನಿಂದ ಪರಾರಿಯಾಗಿದ್ದ ಆರೋಪಿ ಕಳೆದ ದಿನ ಹರಿಹರ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ತಲೆ ಮರೆಸಿಕೊಂಡಿದ್ದನು. ಪ್ರಕರಣ ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಸಿಬ್ಬಂದಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದುಗ್ಗವತಿ ಗ್ರಾಮದ ಬಳಿ ಇಂದು (ಭಾನುವಾರ) ಬಂಧಿಸಿದ್ದೇವೆ ಎಂದು ಮಾಹಿತಿ ನೀಡಿದರು.

RELATED ARTICLES
- Advertisment -
Google search engine

Most Popular