ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕ್ರಿ.ಪೂ 4 ರ ಶತಮಾನದಲ್ಲಿ ಜನಿಸಿದ ಯೇಸು ಮಹಾ ಪ್ರಭು 33 ವರ್ಷಗಳು ಜೀವಿಸಿದ್ದರು ಆ ಮಹಾನ್ ಪುರುಷನ ಸಾಧನೆ ಲೋಕವಿರುವ ತನಕ ಬೆಳಕಿನಂತೆ ಪ್ರಜ್ವಲಿಸಲಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಡೋರ್ನಹಳ್ಳಿ ಸಂತ ಅಂತೋಣಿ ಬಸಲಿಕಾ ದಲ್ಲಿ ನಡೆದ ಕ್ರಿಸ್ ಮಸ್ ಹಬ್ಬದಲ್ಲಿ ಪಾಲ್ಗೊಂಡು ಚರ್ಚ್ನ ಧರ್ಮಗುರುಗಳಾದ ಎನ್.ಟಿ.ಜೋಸೆಫ್ ಮತ್ತು ಪ್ರವೀಣ್ ಪೆದ್ರು ಹಾಗೂ ಇತರರಿಗೆ ಹಬ್ಬದ ಶುಭಾಶಯ ಕೋರಿ ಮಾತನಾಡಿದ ಅವರು ಬೈಬಲ್ ಗ್ರಂಥ ಕ್ರಿಸ್ಟಿಯನರಿಗೆ ಮಾತ್ರವಲ್ಲದೆ ಒಳಿತನು ಪ್ರೀತಿಸುವ ಎಲ್ಲರಿಗೂ ಅದು ಸದ್ಬಾವನಾ ಗ್ರಂಥವಾಗಿದೆ ಎಂದರು.

ಕ್ರಿಸ್ ಮಸ್ ಆಚರಣೆ ಭಾವೈಕ್ಯತೆ ಬೆಳಕು ಚೆಲ್ಲುವ ಹಬ್ಬವಾಗಿದ್ದು ಜೋಸೆಫ್ ಮತ್ತು ಮೇರಿ ತಾಯಿ ಬೆಲ್ತೇಯೇಮ್ ಗೆ ಹೋಗಿದ್ದಾಗ ಆ ಸಮಯದಲ್ಲಿ ಭಗವಂತನ ಸ್ವರೂಪವಾದ ಯೇಸು ಕ್ರಿಸ್ತನಿಗೆ ಕುರಿ ಕೊಟ್ಟಿಗೆಯಲ್ಲಿ ಜನ್ಮ ನೀಡಿದ್ದು ಅಂದು ಜನಿಸಿದ ಮಹಾಪ್ರಭು ಜಗದ ಬೆಳಕಾಗಿ ವಿಜೃಭಿಸುತ್ತಿದ್ದಾರೆ ಎಂದು ಕೊಂಡಾಡಿದ್ದರು.
ದಾರ್ಶನಿಕ ಕವಿ ಡಿ.ವಿ.ಗುಂಡಪ್ಪನವರು ತಮ್ಮ ಮಂಕ್ಕುತಿಮ್ಮನ ಕಗ್ಗದ ಕಾವ್ಯ ನುಡಿಯಲ್ಲಿ ಯೇಸು ಪ್ರಭುಗಳನ್ನು ಕುರಿತು ತನ್ನ ಶಿಲುಭೆಯ ತಾನೇ ಒತ್ತನಲ್ಲ ಗುರು ಯೇಸು ನಿನ್ನ ಕರ್ಮದ ಹೊರೆಯ ಬಿಡದೆ ನೀನೇ ಹೊರು ಎಂದು ಹೇಳಿರುವ ಪರ ಪುಂಜಗಳು ದೇವ ಪುತ್ರ ಯೇಸುವಿನ ಬ್ರಹ್ಮಾಂಡ ವ್ಯಕ್ತಿತ್ವದ ಮಹಾ ದರ್ಶನಕ್ಕೆ ಸಾಕ್ಷಿ ಎಂದು ನುಡಿದರು.
ಪಾಪಿಗಳನ್ನು ರಕ್ಷಿಸುವುದೇ ತನ್ನ ಜೀವನದ ಉದ್ದೇಶ ಎಂದು ಯೇಸು ದೇವ ಸ್ಪಷ್ಟ ಸಂದೇಶ ನೀಡಿದ್ದು ಇದನ್ಬು ಅರಿತು ಎಲ್ಲರೂ ತಮ್ಮ ಜೀವನ ರೂಪಿಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.
ಚರ್ಚ್ ನ ಫಾದರ್ ಗಳಾದ ಎನ್.ಟಿ.ಜೋಸೆಫ್, ಪ್ರವೀಣ್ ಪೆದ್ರು, ಜಿ.ಪಂ.ಮಾಜಿ ಸದಸ್ಯರಾದ ಮಾರ್ಚಳ್ಳಿಶಿವರಾಮ್ , ಸಿದ್ದಪ್ಪ, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ್, ಪಿಎಲ್ ಡಿ ಬ್ಯಾಂಕ್ ನಿರ್ದೇಶಕರಾದ ಬಿ.ಸಿದ್ದೇಗೌಡ, ಪ್ರದೀಪ್ ಕುಮಾರ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಗ್ರಾ.ಪಂ.ಸದಸ್ಯರಾದ ಕೆ.ಪಿ.ಜಗದೀಶ್, ಉಮೇಶ, ಕುಮಾರ್, ಭಾಗ್ಯಕರಿಗೌಡ, ಪುರಸಭೆ ಸದಸ್ಯ ನಟರಾಜು, ಮುಖಂಡರಾದ ಕಾಳಿಕುಮಾರ್, ಪುಟ್ಟೇಗೌಡ, ವಿಜಯಕುಮಾರ್, ಲೋಕೇಶ್ (ಗುಡ್ಡಪ್ಪ), ಪ್ರಕಾಶ್, ಗೋವಿಂದ, ಮಹೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.