ಮಂಡ್ಯ: ಶೀಘ್ರದಲ್ಲೇ ನೀರು ಸಲಹಾ ಸಮಿತಿ ಸಭೆ ಕರೆದು ನಾಲೆಗಳಿಗೆ ನೀರು ಹರಿಸೊ ನಿರ್ಧಾರ ಮಾಡಲಾಗುವುದು ಎಂದು ಮಂಡ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದರು.
ನಾವು ನಿರೀಕ್ಷಿಸಿದ ಮಟ್ಟದಲ್ಲಿ ಮೇಲಿಂದ ನೀರು ಹರಿದು ಬರ್ತಿಲ್ಲ.ಭತ್ತ ನಾಟಿ ಮಾಡಲು ಜುಲೈ 15 ರ ವರೆಗೂ ಟೈಂ ಇದೆ. ಹಾಗಾಗಿ ನಾವು ನಿರೀಕ್ಷೆ ಇಟ್ಟುಕೊಳ್ಳಣ. ಮಳೆ ಬಂದು ಡ್ಯಾಂ ನೀರಿನ ಮಟ್ಟ 110 ಕ್ಕೆ ಏರಿದ್ರೆ ಸಮಸ್ಯೆ ಇರೋದಿಲ್ಲ. ಆದ್ರೆ ಈಗ ರೈತರು ನೀರು ಕೇಳ್ತಿರೋದು ಕೆರೆ ಕಟ್ಟೆ ತುಂಬಿಸಿಕೊಳ್ಳಲು ಹಾಗಾಗಿ ಶೀಘ್ರವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸೂರಜ್ ರೇವಣ್ಣ ಬಂಧನ ವಿಚಾರವಾಗಿ ಮಾತನಾಡಿ ಕಾನೂನಿದೆ ಎರಡೂ ಕಡೆಯಿಂದ ದೂರು ದಾಖಲಾಗಿದೆ. ಪೊಲೀಸರು ಎಸ್ ಐಟಿ ತಂಡ ತನಿಖೆ ನಡೆಸ್ತಿದೆ. ದೇವೇಗೌಡರ ಕುಟುಂಬಕ್ಕೆ ಈ ರೀತಿ ಆಗ್ತಿರೋದು ನಮಗೂ ಮುಜುಗರ ಇದೆ. ಪದೇ ಪದೇ ಈ ರೀತಿಯ ಬೆಳವಣಿಗೆ ವಿಚಾರ ರಾಜಕಾರಣ ತೀರಾ ವೈಯಕ್ತಿಕವಾಗಿ ಹೋಗಬಾರದು. ಅಭಿವೃದ್ಧಿ ಮೇಲೆ ರಾಜಕಾರಣ ಮಾಡಬಹುದು ಎಂದರು.
ಮದ್ದೂರು ಶಾಸಕ ಕದಲೂರು ಉದಯ್ ಗನ್ ಮ್ಯಾನ್ ಗೂ ದರ್ಶನ್ ಬಾಡಿಗಾರ್ಡ್ ಗೂ ಗಲಾಟೆ ವಿಚಾರ ಪ್ರತಿಕ್ರಿಯಿಸಿ ಈ ಬಗೆಗೆ ಪೊಲೀಸರಿದ್ದಾರೆ ಅವರ ಇಲಾಖೆಯವರೇ ಇರೋದ್ರಿಂದ ತನಿಖೆ ಮಾಡ್ತಾರೆ.
ಅವರಿಬ್ಬರು ಸ್ನೇಹಿತರ ಏನು ಎಂಬ ಬಗೆಗೆ ಗೊತ್ತಿಲ್ಲ.ಇದ್ರ ಬಗೆಗೆ ನಾನು ನಿನ್ನೆಯೆ ಮಾತಾಡಿದ್ದೀನಿ ಎಂದು ಹೇಳಿದರು.
ದೇವಗೀರಿ ಹಿಲ್ಸ್ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರೊ ವಿಚಾರ
ಈ ಹಿಂದೆ ಅವರು ಸಿ ಎಂ ಆಗಿದ್ದಾಗ ಆ ಯೋಜನೆ ವಿರೋಧಿಸಿದ್ದರು. ಆ ಪ್ರದೇಶದಲ್ಲಿ ಗಣಿಗಾರಿಕೆ ಹೋದವರು ಅಧಿಕಾರ ಕಳ್ಕೊತ್ತಾರೆ. ಎಂಬ ಬಗೆಗೆ ನಂಬಿಕೆ ಇದೆ. ಕುಮಾರಸ್ವಾಮಿ ರಾಜ್ಯದ ಅಭಿವೃದ್ದಿಗೆ ಪೂರಕವಾಗಿ ಕೆಲಸ ಮಾಡ್ತಾರೆ ಎಂಬ ವಿಶ್ವಾಸ ಇದೆ. ಅಭಿವೃದ್ದಿಗೆ ಪೂರಕವಾಗಿ ಕೆಲಸಮಾಡಿದ್ರೆ ನಮ್ಮದೂ ಸಹಕಾರ ಇದೆ.
ಕುಮಾರಸ್ವಾಮಿ ವರ್ಸಸ್ ರಾಜ್ಯ ಸರ್ಕಾರ ಎಂಬಂಥಹ ಸ್ಥಿತಿ ನಿರ್ಮಾಣವಾಗಿಲ್ಲ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಬೀಳಲಿದೆ ಎಂಬ ಸಚಿವ ಸೋಮಣ್ಣ ಹೇಳಿಕೆ ವಿಚಾರ
ಅವರನ್ನ ಕಾಯ್ತಾ ಇರಲು ಹೇಳಿ, ಅವರೇನು ರಾಜ್ಯಕ್ಕೆ ಬರ್ತಾರಾ.? ಹಾಗೆ ನೋಡುದ್ರೆ ನಮ್ಮ ಸರ್ಕಾರ ಸುಭದ್ರವಾಗಿದ್ದು. ಕೇಂದ್ರ ಸರ್ಕಾರವೇ ಅಪಾಯದಲ್ಲಿದೆ ಎಂದರು.
ಚನ್ನಪಟ್ಟಣ ಉಪ ಚುನಾವಣೆ ವಿಚಾರ
ಚುನಾವಣೆ ಘೋಷಣೆಯಾಗಲಿ ಅಲ್ಲಿ ಗೆಲ್ಲುವ ಅಭ್ಯರ್ಥಿಯನ್ನ ಕಣಕ್ಕಿಳಿಸ್ತೀವಿ. ಯೋಗೇಶ್ವರ್ ಎತ್ತರದಲ್ಲಿದ್ದಾರೆ
ಕುಮಾರಸ್ವಾಮಿ ಅವರಿಗಿಂತಲೂ ಎತ್ತರದಲ್ಲಿದ್ದಾರೆ.ಅವರ ಹಾಗೆ ನಾವು ತೊಡೆ ತಟ್ಟುವ ಸ್ಥಿತಿಯಲ್ಲಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.