ಮಂಡ್ಯ: ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಲಂಚ ಪಡೆದಿರೋ ಆರೋಪ ಸತ್ಯಕ್ಕೆ ದೂರ ಎಂದ ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಾಬು ಬಂಡ್ಡಿಸಿದ್ದೇಗೌಡ ಸ್ಪಷ್ಟನೆ ನೀಡಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಅಧಿಕಾರದಲ್ಲಿದ್ದಾಗ ಯಾರ್ ಯಾರ ಹತ್ರ ಎಷ್ಟೇಷ್ಟು ಈಸ್ಕೊಂಡು ಮಾಡ್ಕೊಟ್ಟಿದ್ದಾರೆ ಎಂದು ಈ ಆರೋಪ ಮಾಡಿರುವವರನ್ನೆ ಈ ಬಗ್ಗೆ ಕೇಳಬೇಕು ಎಂದು ಆರೋಪ ಮಾಡಿದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ನಮ್ಮ ಬಳಿ ಯಾರು ಏನು ಕೇಳಿಲ್ಲ,ಆ ಪ್ರಯತ್ನನು ಯಾರು ಮಾಡಿಲ್ಲ. ನಮ್ ಕಾಂಗ್ರೆಸ್ ಸರ್ಕಾರ ಹಿರಿಯ ಶಾಸಕರು ಹಾಗೂ ಪಕ್ಷಕ್ಕಾಗಿ ದುಡಿದ ಶಾಸಕರು ಗಳಿಗೆ ಈ ಸ್ಥಾನ ನೀಡಿ ಗೌರವ ನೀಡ್ತಿದೆ. ಈ ಆರೋಪ ಅವರಲ್ಲೆ ನಡೆದಿರಬೇಕು ಇಲ್ಲ ಕಲ್ಪನೆ ಮಾಡಿಕೊಂಡು ಹೇಳ್ತಿರ ಬೇಕಷ್ಟೆ ಎಂದು ತಿಳಿಸಿದರು.