ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ೨೦೨೮ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ನಿಚ್ಚಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲಿದ್ದು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಗಳಾಗುವುದನ್ನು ಯಾರಿಂದಲೂ
ತಪ್ಪಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.

ಕೆ.ಆರ್.ನಗರ ಪಟ್ಟಣದ ಶ್ರೀರಾಮ ಬಡಾವಣೆಯಲ್ಲಿರುವ ಹೆಚ್.ಡಿ.ದೇವೇಗೌಡ ಸಮುದಾಯ ಭವನದ
ಆವರಣದಲ್ಲಿ ನಡೆದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತ ಸಭೆಯಲ್ಲಿ ಮಾತನಾಡಿದ ಅವರು
ನಮಗೂ ಎಲ್ಲಾ ವರಸೆಯ ರಾಜಕಾರಣ ಮಾಡಲು ಬರುತ್ತದೆ ಹಾಗಾಗಿ ಪ್ರತಿಯೊಂದನ್ನು ಗಮನಿಸುತ್ತಿದ್ದು ಸಮಯ ಬಂದಾಗ ತಕ್ಕ ಉತ್ತರ ನೀಡುತ್ತೇವೆ ಎಂದರು.
ಕ್ಷೇತ್ರದ ಅಭಿವೃದ್ದಿಯ ಹಿತದೃಷ್ಟಿಯಿಂದ ನಾನು ನಮ್ಮ ನಾಯಕರಾದ ಕುಮಾರಸ್ವಾಮಿಯವರ ಮೂಲಕ ಕೆಲಸ ಮಾಡಲು ನಿರ್ಧರಿಸಿದ್ದು ಇದರ ಮೊದಲ ಭಾಗವಾಗಿ ಪಟ್ಟಣದ ಹೊರ ವಲಯದ ಹಳೆ ರೈಲ್ವೆ ನಿಲ್ದಾಣದ ಬಳಿ ಖಾಲಿ ಇರುವ ೨೨ ಎಕರೆ ಜಾಗದಲ್ಲಿ ರೈಲ್ವೆ ರಕ್ಷಣಾ ದಳದ(ಆರ್‌ಪಿಎಫ್) ತರಬೇತಿ ಕೇಂದ್ರ ಆರಂಭಿಸಲು ಕೇಂದ್ರ
ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ಇದು ಶೀಘ್ರದಲ್ಲೇ ಮಂಜೂರಾಗಲಿದ್ದು ೫೦೦ ಕೋಟಿ ವೆಚ್ಚದ ಈ ಯೋಜನೆಯಿಂದ ಎರಡು ತಾಲೂಕಿನ ಜನತೆಗೆ ಅನುಕೂಲವಾಗಲಿದೆ ಎಂದು ನುಡಿದರು.
ಇದರ ಜತೆಗೆ ಅರ್ಕೇಶ್ವರ ದೇವಾಲಯದಿಂದ ಹೆಬ್ಬಾಳು, ಚುಂಚನಕಟ್ಟೆ, ಹೊಸೂರು, ಹನಸೋಗೆ, ಕರ್ತಾಳು ಮೂಲಕ ಕೇರಳಾಪುರ ಮತ್ತು ಮಂಚನಹಳ್ಳಿಯಿoದ ಮಿರ್ಲೆ, ಅಂಕನಹಳ್ಳಿ, ಸಾಲಿಗ್ರಾಮ ಸಂಪರ್ಕ ರಸ್ತೆಗಳನ್ನು
ಚರ್ತುಷ್ಪಥವನ್ನಾಗಿ ಮೇಲ್ದರ್ಜೆಗೇರಿಸಿ ಅನುದಾನ ನೀಡುವಂತೆ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ಗಡ್ಕರಿಯವರಿಗೆ ಕೋರಲಾಗಿದ್ದು ಇದಕ್ಕೆ ಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಪಕ್ಷ ನಿಷ್ಠೆ ಮತ್ತು ಪ್ರಾಮಾಣಿಕತೆ ಇಲ್ಲದೆ ಎರಡು ಕಡೆ ಆಟವಾಡುವ ಸ್ವಾರ್ಥಿಗಳಿಗೆ ಜೆಡಿಎಸ್‌ನಲ್ಲಿ
ಜಾಗವಿಲ್ಲ ಎಂದ ಮಾಜಿ ಸಚಿವರು ಪಕ್ಷದಿಂದ ಎಲ್ಲವನ್ನು ಅನುಭವಿಸಿ ಆನಂತರ ಕತ್ತು ಕೊಯ್ಯುವ ಚಾಳಿ
ಬೆಳೆಸಿಕೊಂಡವರು ದಾರಾಳವಾಗಿ ಹೊರ ಹೋಗಬಹುದು ಎಂದರು.
ಶಿಕ್ಷಕನ ಮಗನಾದ ನಾನು ೩೬ನೇ ವಯಸ್ಸಿಗೆ ರಾಜಕಾರಣ ಬಂದು ಮೂರು ಬಾರಿ ಶಾಸಕನಾಗಿ ಒಮ್ಮೆ ಸಚಿವನೂ ಆಗಿದ್ದೇನೆ ಆಗಾಗಿ ನನಗೆ ರಾಜಕೀಯದಿಂದ ಆಗಬೇಕಾದದ್ದು ಏನು ಇಲ್ಲ ಈಗ ನನ್ನ ಆಧ್ಯತೆ ಪಕ್ಷ ನಿಷ್ಠರು ಮತ್ತು ನನ್ನನ್ನು ನಂಬಿರುವವರನ್ನು ಕಾಪಾಡುವ ಉದ್ದೇಶಕ್ಕೆ ಎಂದು ತಿಳಿಸಿದರು.
ಚುನಾವಣೆಯಲ್ಲಿ ಸೋಲು ಮತ್ತು ಗೆಲುವು ಶಾಶ್ವತವಲ್ಲ ಈ ಹಿಂದೆ ಮಾಜಿ ಸಚಿವರುಗಳಾದ ಎಸ್.ನಂಜಪ್ಪ ಮತ್ತು ಹೆಚ್.ವಿಶ್ವನಾಥ್ ಅವರು ಹಲವು ಚುನಾವಣೆಗಳಲ್ಲಿ ಗೆದ್ದಿದ್ದಾರೆ ಆಗಾಗಿ ನೀವು ಚುನಾವಣಾ ರಾಜಕಾರಣವನ್ನು ಬಿಡಬಾರದು ಎಂದು ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ, ಅವರಿಬ್ಬರಿಗೆ ಜನರೇ ಹಣ ನೀಡಿ ಗೆಲ್ಲಿಸುತ್ತಿದ್ದರೂ ಆದರೆ ನಾನು ನನ್ನ ಮನೆಯ ಹಣವನ್ನು ತಂದು ಖರ್ಚು ಮಾಡಿ ರಾಜಕೀಯ ಮಾಡುತ್ತಿದ್ದೇನೆಂದು ಸ್ಪಷ್ಟಪಡಿಸಿದರು.
ಕಳೆದ ಚುನಾವಣಾ ಸೋಲಿನ ನಂತರ ನಾನು ಯಾವುದೇ ನೋವಿಲ್ಲದೆ ಆನಂದವಾಗಿದ್ದು ಅಧಿಕಾರ
ಇದ್ದಾಗ ಮತ್ತು ಇಲ್ಲದಾಗ ನಾಟಕವಾಡುವ ಜನರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದೇನೆ ಹಾಗಾಗಿ
ಈಗ ವಸ್ತುಸ್ಥಿತಿ ಅರಿತಿದ್ದು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕುಟುಂಬದ ಸದಸ್ಯರನ್ನು ಸ್ಪರ್ದಿಗಿಳಿಸದೆ ಪಕ್ಷಕ್ಕಾಗಿ ದುಡಿದವರಿಗೆ ಆದ್ಯತೆ ನೀಡಲಿದ್ದು ಇದನ್ನು ಅರಿತು ಎಲ್ಲರೂ ಕೆಲಸ ನಿರ್ವಹಿಸಿ ಎಂದು ಸಲಹೆ ನೀಡಿದರು.
ಪಕ್ಷದ ಇಬ್ಬರು ಮಹಾನೀಯರು ಕಳೆದ ಚುನಾವಣೆಯಲ್ಲಿ ಪಿಎಲ್‌ಡಿ ಬ್ಯಾಂಕ್ ಮತ್ತು ಎಪಿಎಂಸಿ ಆಡಳಿತ
ಜೆಡಿಎಸ್ ತೆಕ್ಕೆಗೆ ಬರುವುದನ್ನು ತಪ್ಪಿಸಿದರು ಹಾಗಾಗಿ ಅಂತಹ ಅವಕಾಶವಾದಿಗಳು ಮುಂದೆ ಯಾವುದೇ
ಚುನಾವಣೆಗಳಲ್ಲಿಯೂ ಗೆಲ್ಲದಂತೆ ನಮ್ಮ ಕಾರ್ಯಕರ್ತರು ನೋಡಿಕೊಳ್ಳಬೇಕು ಎಂದು ಪರೋಕ್ಷವಾಗಿ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಎಸ್.ಹರಿಚಿದoಬರ, ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿಸೋಮು ವಿರುದ್ದ ಹರಿಹಾಯ್ದರು.
ಜಿ.ಪಂ.ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಮಾಜಿ ಸದಸ್ಯರಾದ ಅಮಿತ್.ವಿ.ದೇವರಹಟ್ಟಿ, ಎಂ.ಟಿ.ಕುಮಾರ್, ನವ ನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಪುರಸಭೆ ಮಾಜಿ ಅಧ್ಯಕ್ಷ ಡಿ.ಕಾಂತರಾಜು,
ಸದಸ್ಯರಾದ ಉಮೇಶ್, ಸಂತೋಷ್‌ಗೌಡ, ಮಾಜಿ ಸದಸ್ಯರಾದ ಕೆ.ಬಿ.ಸುಬ್ರಮಣ್ಯ, ಕೆ.ಆರ್.ಗಿರೀಶ್, ಹೆಚ್.ಸಿ.ರಾಜು, ರಾಜ್ಯ ಜೆಡಿಎಸ್ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷೆ ದ್ರಾಕ್ಷಾಯಿಣಿ, ಸಾಲಿಗ್ರಾಮ ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ
ಅಧ್ಯಕ್ಷ ಕೋಳಿಕಿಟ್ಟಿ, ತಾ.ಪಂ. ಮಾಜಿ ಸದಸ್ಯರಾದ ಶ್ರೀನಿವಾಸ್‌ಪ್ರಸಾದ್, ನಾಗಣ್ಣ, ತಂದ್ರೆರವಿ, ರತ್ನಮ್ಮಮಂಜುನಾಥ್, ತಾಲೂಕು ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಎಂ.ಟಿ.ಅಣ್ಣೇಗೌಡ ಮುಖಂಡರಾದ ಹೆಚ್.ಕೆ.ಮಧುಚಂದ್ರ, ಹನಸೋಗೆನಾಗರಾಜು, ಹೆಚ್.ಎಸ್.ಜಗದೀಶ್, ಎಂ.ಎಸ್.ಕಿಶೋರ್, ಬಂಡಹಳ್ಳಿಕುಚೇಲ, ಬಾಲಾಜಿಗಣೇಶ್, ಎ.ಕುಚೇಲ ಮತ್ತಿತರರು ಹಾಜರಿದ್ದರು.
ಜ.೨೪ರಂದು ಶುಕ್ರವಾರ ಪಟ್ಟಣಕ್ಕೆ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ
ಹೆಚ್.ಡಿ.ಕುಮಾರಸ್ವಾಮಿ ಅವರು ಆಗಮಿಸಲಿದ್ದು ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಪಕ್ಷದ
ವತಿಯಿಂದ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.
ಪಟ್ಟಣದ ಶ್ರೀರಾಮ ಬಡಾವಣೆಯಲ್ಲಿರುವ ಹೆಚ್.ಡಿ.ದೇವೇಗೌಡ ಸಮುದಾಯ ಭವನದ ಆವರಣದಲ್ಲಿ ನಡೆದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತ ಸಭೆಯಲ್ಲಿ ಮಾತನಾಡಿದ ಅವರು ಅಂದು ಬೆಳಿಗ್ಗೆ ೧೦ ಗಂಟೆಗೆ ಪಟ್ಟಣದ ಹೊರ ವಲಯದಲ್ಲಿರುವ ತೋಪಮ್ಮನವರ ದೇವಾಲಯದ ಬಳಿ ಕೇಂದ್ರ ಸಚಿವರು ಮತ್ತು ಮತ್ತು ವಾಹನಗಳ ವ್ಯವಸ್ಥೆ ಹೇಗಿರಬೇಕು ಎಂದು ಪಟ್ಟಿ ನೀಡಬೇಕು ಎಂದು ಸೂಚನೆ ನೀಡಿದರು.
ವಿಧಾನ ಸಭೆ ಚುನಾವಣೆಯ ನಂತರ ನಡೆಯುತ್ತಿರುವ ಪಕ್ಷದ ಈ ಬೃಹತ್ ಕಾರ್ಯಕ್ರಮದ ಯಶಸ್ಸಿಗೆ ಸರ್ವರೂ ಹೆಗಲುಕೊಟ್ಟು ಕೆಲಸ ಮಾಡಬೇಕೆಂದ ಸಾ.ರಾ.ಮಹೇಶ್ ಈ ವಿಚಾರದಲ್ಲಿ ಪರಸ್ಪರ ಕುಳಿತು ಚರ್ಚಿಸಿ ಯಾವುದೇ ಸಮಸ್ಯೆ ಮತ್ತು ಸಲಹೆ ಸೂಚನೆಗಳಿದ್ದರೂ ನನ್ನ ಗಮನಕ್ಕೆ ತರಬೇಕು ಎಂದು ತಿಳಿಸಿದರು.