Saturday, April 19, 2025
Google search engine

Homeರಾಜ್ಯಸುದ್ದಿಜಾಲವಿಜೃಂಭಣೆಯಿಂದ ಜರುಗಿದ ಪವಾಡ ಪುರುಷ ಸಂತ ಅಂತೋಣಿಯವರ ವಾರ್ಷಿಕ ಜಾತ್ರಾ ಮಹೋತ್ಸವ

ವಿಜೃಂಭಣೆಯಿಂದ ಜರುಗಿದ ಪವಾಡ ಪುರುಷ ಸಂತ ಅಂತೋಣಿಯವರ ವಾರ್ಷಿಕ ಜಾತ್ರಾ ಮಹೋತ್ಸವ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಕೆ.ಆರ್.ನಗರ ತಾಲೂಕಿನ ಡೋರ‍್ನಹಳ್ಳಿ ಗ್ರಾಮದಲ್ಲಿರುವ ಪವಾಡ ಪುರುಷ ಸಂತ ಅಂತೋಣಿಯವರ ವಾರ್ಷಿಕ ಜಾತ್ರಾ ಮಹೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿoದ ನೆರವೇರಿತು.

ಬಸಿಲಿಕಾದಲ್ಲಿ ಧರ್ಮಗುರುಗಳಾದ ಡಾ.ಎನ್.ಟಿ.ಜೋಸೆಫ್ ಮತ್ತು ಆಡಳಿತಾಧಿಕಾರಿ ಪ್ರವೀಣ್ ಪೆದ್ರುರವರ ನೇತೃತ್ವದಲ್ಲಿ ಜೂನ್ ೦೩ ರಿಂದ ಆರಂಭವಾದ ಜಾತ್ರೆಯಲ್ಲಿ ೯ ದಿನಗಳ ಕಾಲ ವಿವಿಧ ಬಲಿಪೂಜೆ, ಬೋಧನೆ, ಪ್ರಾರ್ಥನೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಗುರುವಾರ ಬೆಳಗ್ಗೆ ೧೦ಕ್ಕೆ ಮೈಸೂರು ಚರ್ಚ್ನ ಧರ್ಮ ಗುರು ಡಾ.ಬರ್ನಾಡ್ ಮೋರಾಸ್ ಅವರಿಂದ ಗಾಯನ ಪೂಜೆ ನಡೆಯಿತು. ವಿವಿದ ಭಾಗಗಳ ಚರ್ಚ್ಗಳಿಂದ ಆಗಮಿಸಿದ್ದ ಧರ್ಮಗುರುಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತಮಿಳುನಾಡು, ಆಂದ್ರಪ್ರದೇಶ, ಮಹಾರಾಷ್ಟç, ಕೇರಳ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಮೇಣದ ಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು.

ಸಂಜೆ ಅಂತೋಣಿಯವರ ಉತ್ಸವ ಮೂರ್ತಿಯನ್ನು ಅಲಂಕೃತಗೊoಡ ತೇರಿನಲ್ಲಿ ಡರ‍್ನಹಳ್ಳಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು.

ತಾ.ಪಂ. ಇಒ ಜಿ.ಕೆ.ಹರೀಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು, ಪಿಡಿಒ ಧನಂಜಯ್, ಲಾಳಂದೇವನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಪಾರ್ವತಮ್ಮ, ಉಪಾಧ್ಯಕ್ಷೆ ಸುಮಾ, ಗ್ರಾ.ಪಂ. ಸದಸ್ಯರಾದ ಉಮೇಶ್, ಚೌರಪ್ಪ, ಸುನೀಲ್, ಬಾಲಾಜಿಗಣೇಶ್, ಶಿವಕುಮಾರ್ ಸೇರಿದಂತೆ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಮತ್ತು ಮುಖಂಡರುಗಳು ಪಾಲ್ಗೊಂಡು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದಲ್ಲದೆ ಧರ್ಮಗುರುಗಳಿಗೆ ಅಭಿನಂದನೆ ಸಲ್ಲಿಸಿದರು.

RELATED ARTICLES
- Advertisment -
Google search engine

Most Popular