ಮಂಗಳೂರು (ದಕ್ಷಿಣ ಕನ್ನಡ): ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೇತ್ರಾವತಿ ನದಿ ತಟದ ಹರೇಕಳ ಪಾವೂರು ವ್ಯಾಪ್ತಿಯ ಅನೇಕ ಪ್ರದೇಶಗಳು ಜಲಾವೃತಗೊಂಡಿದ್ದು ಈ ಪ್ರದೇಶಕ್ಕೆ ಬುಧವಾರ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿಯವರು ಪಾವೂರು ಗ್ರಾಮದ ಜಲಾವೖತವಾಗಿರುವ ಅಜಿರುಳಿಯ ಎಂಬ ಪ್ರದೇಶಕ್ಕೆ ಭೇಟಿ ನೀಡಿದ ಅವರು ಅಪಾಯಕಾರಿ ಮನೆಗಳು ಹಾಗೂ ಪ್ರದೇಶಗಳ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಪಡೆದುಕೊಂಡು ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭ ಸಹಾಯಕ ಆಯುಕ್ತರಾದ ಹರ್ಷವರ್ದನ್, ತಹಶೀಲ್ದಾರ್ ಪುಟ್ಟರಾಜು, ,ಕಂದಾಯ ನಿರೀಕ್ಷಕರಾದ ಪ್ರಮೋದ್, ಗ್ರಾಮ ಲೆಕ್ಕಾಧಿಕಾರಿ ನಯನಾ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಜೀದ್ ಮತ್ತು ವಾರ್ಡ್ ಸದಸ್ಯರು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.