ಚಾಮರಾಜನಗರ: ಗಮಕ ಕಲೆ ಅಮರವಾದದ್ದು. ಗಮಕಕಲೆಯು ಮನುಷ್ಯನನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಗಮಕಕಲೆಯನ್ನು ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಗಮಕಿ ಹಾಗೂ ವೈದ್ಯರಾದ ಡಾ. ಉಮಾರಾಣಿ ತಿಳಿಸಿದರು.
ಅವರು ಕರ್ನಾಟಕ ಗಮಕಕಲಾ ಪರಿಷತ್ತು ಬೆಂಗಳೂರು ಮತ್ತು ಚಾಮರಾಜನಗರ ಜಿಲ್ಲಾ ಗಮಕ ಕಲಾ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಕುಮಾರವ್ಯಾಸ ಜಯಂತಿ ಹಾಗೂ ಗಮಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಕನ್ನಡದ ಮಹತ್ವದ ಕವಿ ಕುಮಾರವ್ಯಾಸರು. ಕರ್ನಾಟ ಭಾರತ ಕಥಾಮಂಜರಿ ರಚಿಸಿ ಕನ್ನಡ ಸಾಹಿತ್ಯದಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಮಾಡಿದವರು. ಗದುಗಿನ ವೀರನಾರಾಯಣ ಸ್ವಾಮಿಯ ಭಕ್ತರಾಗಿದ್ದವರು. ಚಾಮರಾಜನಗರ ಜಿಲ್ಲೆಯಲ್ಲಿ ಗಮಕಕಲೆ ಬಹಳ ಪ್ರಸಿದ್ಧಿ ಪಡೆದಿತ್ತು. ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಗಮಕ ಕಲೆಯನ್ನು ಬೆಳೆಸುವ ದಿಕ್ಕಿನಲ್ಲಿ ಜಿಲ್ಲಾ ಗಮಕ ಕಲಾ ಪರಿಷತ್ತು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಲಿ ಎಂದು ತಿಳಿಸಿದರು.

ಗಮಕಿ ವಿಜಯಲಕ್ಷ್ಮಿ ಹಾಗೂ ಗಮಕಿ ವೀರಶೆಟ್ಟಿರವರು ಕುಮಾರವ್ಯಾಸ ರಚಿತ ಕರ್ನಾಟ ಭಾರತ ಕಥಾಮಂತರಿಯ ಅನೇಕ ಪದ್ಯಗಳನ್ನು ವಾಚಿಸಿದರು. ಗಮಕವಾಚನವು ಸಭಿಕರಿಗೆ ಬಹಳ ಅನಂದವನ್ನು ತಂದಿತು.
ಅಧ್ಯಕ್ಷತೆಯನ್ನು ಚಾಮರಾಜನಗರ ಜಿಲ್ಲಾ ಗಮಕಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಗಡಿ ಜಿಲ್ಲೆ ಚಾಮರಾಜನಗರ ಗಮಕದ ತವರೂರು. ತಿಪಟೂರು ರಾಮಸ್ವಾಮಿ, ಸುಗಂಧರಾಜನ್, ರಾಮಸಮುದ್ರ ರಾಮದಾಸ್, ವಿಜಯಲಕ್ಷ್ಮಿ ,ನಾಗೇಶ್ ರಾವ್, ಗಮಕಿ ಸುಬ್ರಹ್ಮಣ್ಯಂ. ವರದರಾಜು, ಜಯರಾಮ್ ಮುಂತಾದ ಶ್ರೇಷ್ಠ ಗಮಕ ವಿದ್ವಾಂಸರು ನೆಲೆಸಿದ್ದ ಪ್ರದೇಶವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಗಮಕಕಲೆ ಯುವ ಜನಾಂಗವನ್ನು ತಲುಪುತ್ತಿಲ್ಲ. ಕರ್ನಾಟಕ ಗಮಕಲಾ ಪರಿಷತ್ತು ಜಿಲ್ಲಾ ಘಟಕ ಅಸ್ತಿತ್ವಕ್ಕೆ ಬಂದಿದ್ದು ಗಮಕಕಲೆ ಬೆಳೆಸುವ ದಿಕ್ಕಿನಲ್ಲಿ ಯೋಜನೆಗಳು ರೂಪಿಸಿ ಗಮಕ ಕಲೆಯನ್ನು ಬೆಳೆಸುವ ದಿಕ್ಕಿನಲ್ಲಿ ನಮ್ಮೆಲ್ಲರ ಪ್ರಯತ್ನ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗಮಕಿ ವಾಸಂತಿ, ರೇಖಾ, ಪದ್ಮ ಪುರುಷೋತ್ತಮ್, ಸರಸ್ವತಿ, ಬರಹಗಾರ ಲಕ್ಷ್ಮೀ ನರಸಿಂಹ, ವಿವಿಧ ಸಂಘಟನೆಗಳ ಶ್ರೀನಿವಾಸ ಗೌಡ ,ರಾಜು ,ಮೂರ್ತಿ, ರವಿಚಂದ್ರ ಪ್ರಸಾದ್, ದುಂಡು ಮಾದಯ್ಯ, ಶ್ರೀನಿವಾಸ್, ಲೋಕೇಶ್ , ಕೇಶವ್ ಮುಂತಾದವರು ಉಪಸ್ಥಿತರಿದ್ದರು.