ಕೇರಳ : ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಸಿಕ್ಕಿಕೊಂಡಿರುವ ಹಲವಾರು ಜನರನ್ನು ಸಂಪರ್ಕಿಸಲು ಬೈಲಿ ಸೇತುವೆಯ ನಿರ್ಮಾಣವು ಮುಖ್ಯವಾಗಿದೆ. ಅದು ಇಂದು ಮಧ್ಯಾಹ್ನದ ವೇಳೆಗೆ ಸಿದ್ದಗೊಳ್ಳಬಹುದು ಎಂದು ಹೇಳಲಾಗಿದೆ. ಜೊತೆಗೆ ಸ್ನಿಫರ್ ಡಾಗ್‌ಗಳ ನಿಯೋಜನೆ ಮತ್ತು ಕೇಂದ್ರ ಮತ್ತು ರಾಜ್ಯ ತುರ್ತು ರಕ್ಷಣಾ ತಂಡಗಳಿಂದ ೧,೦೦೦ ಕ್ಕೂ ಹೆಚ್ಚು ರಕ್ಷಕರು ಬೃಹತ್ ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ, ಇದು ಅತಿದೊಡ್ಡ ಕಾರ್ಯಾಚರಣೆಯಾಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ (ಜುಲೈ ೩೧) ಎನ್‌ಡಿಆರ್‌ಎಫ್, ಸಶಸ್ತ್ರ ಪಡೆಗಳು ಮತ್ತು ಇತರ ಸಂಸ್ಥೆಗಳು ಮತ್ತು ಸ್ಥಳೀಯ ಜನರ ಸಂಘಟಿತ ಮತ್ತು ವ್ಯಾಪಕ ರಕ್ಷಣಾ ಕಾರ್ಯಾಚರಣೆಗಳು ಪ್ರತಿಕೂಲ ಹವಾಮಾನ ಮತ್ತು ಕಠಿಣ ಭೂಪ್ರದೇಶವನ್ನು ಎದುರಿಸಿ ವಯನಾಡು ಜಿಲ್ಲೆಯ ಭೂಕುಸಿತ ಪೀಡಿತ ಪ್ರದೇಶಗಳಿಂದ ೧,೫೦೦ ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಹೇಳಿದರು.
ವಯನಾಡ್ ಜಿಲ್ಲೆಯ ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶಗಳಲ್ಲಿನ ದೃಶ್ಯಗಳು ವಿಧ್ವಂಸಕವಾಗಿವೆ ಎಂದು ವಿಜಯನ್ ಹೇಳಿದರು. ಈ ಪ್ರದೇಶಗಳು ಸಂಪೂರ್ಣವಾಗಿ ನಾಶವಾಗಿವೆ”. ವಿಪತ್ತು ವಲಯದಿಂದ ಜನರನ್ನು ರಕ್ಷಿಸುವ ಪ್ರಯತ್ನಗಳು ಉತ್ತಮವಾಗಿ ನಡೆಯುತ್ತಿವೆ ಎಂದು ಅವರು ಹೇಳಿದರು.
ಉಕ್ಕಿಹರಿಯುತ್ತಿರುವ ನದಿಗಳ ಮೇಲೆ ಸಣ್ಣ, ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಲಾಯಿತು ಮತ್ತು ವಯನಾಡ್‌ನ ಭೂಕುಸಿತಕ್ಕೆ ಒಳಗಾದ ಕುಗ್ರಾಮಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮುಂದುವರೆಯುತ್ತಿದೆ. ಭಗ್ನಾವಶೇಷ ಮತ್ತು ಬಂಡೆಗಳ ರಾಶಿಯನ್ನು ತೆಗೆದುಹಾಕಲು ಅಗೆಯುವ ಯಂತ್ರಗಳನ್ನು ನಿರಂತರವಾಗಿ ಬಳಸಲಾಗುತ್ತಿದೆ. ಬೈಲಿ ಸೇತುವೆಯ ನಿರ್ಮಾಣವು ಇಂದು ಗುರುವಾರ ಮಧ್ಯಾಹ್ನದ ವೇಳೆಗೆ ಪೂರ್ಣಗೊಳ್ಳುತ್ತದೆ ಮತ್ತು ಅದರ ನಂತರ, ಭಾರೀ ಉಪಕರಣಗಳನ್ನು ತರಬಹುದು ಮತ್ತು ಜನರನ್ನು ಹುಡುಕಲು ಪ್ರಾರಂಭಿಸಬಹುದು ಎಂದು ಸೇನೆಯು ಭರವಸೆ ಹೊಂದಿದೆ.
ಎರಡು ದಿನಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ೧,೫೯೨ ಜನರನ್ನು ರಕ್ಷಿಸಲಾಗಿದೆ. ಅಲ್ಪಾವಧಿಯಲ್ಲಿಯೇ ಇಷ್ಟು ಜನರನ್ನು ಉಳಿಸುವ ಸಂಘಟಿತ ಮತ್ತು ವ್ಯಾಪಕವಾದ ಕಾರ್ಯಾಚಾರಣೆಯ ಸಾಧನೆ ಇದು, ಎಂದು ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.