ಕಲಬುರಗಿ: ಕೂಲಿ ಕೆಲಸಕ್ಕೆ ಹೋಗಿದ್ದ ಇಬ್ಬರು ಮಹಿಳೆಯರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿಯ ತಾವರಗೇರಾ ಕ್ರಾಸ್ ಬಳಿ ನಡೆದಿದೆ. ಶರಣಮ್ಮ(೫೧), ಚಂದಮ್ಮ(೫೩) ಕೊಲೆಯಾದ ಮಹಿಳೆಯರು. ಶರಣಮ್ಮ ಮತ್ತು ಚಂದಮ್ಮ ಇಂದು ಭಾನುವಾರ ಕೂಲಿ ಕೆಲಸಕ್ಕೆಂದು ಹೋಗಿದ್ದ ವೇಳೆ ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಕಲಬುರಗಿ ಗ್ರಾಮಾಂತರ ಠಾಣೆ ಪೊಲೀಸರು ದೌಡಾಯಿಸಿ ತನಿಖೆ ಕೈಗೊಂಡಿದ್ದಾರೆ.
ಕೆ,ಕೆ ನಗರ ನಿವಾಸಿ ಶರಣಮ್ಮ ಮತ್ತು ತಾಜ್ ಸುಲ್ತಾನ್ ಪುರ ನಿವಾಸಿ ಚಂದಮ್ಮ ನಗರದ ಗಂಜ್ ಪ್ರದೇಶ ದಿಂದ ಬಸ್ ನಲ್ಲಿ ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದೆ. ಆದ್ರೆ, ಈ ಇಬ್ಬರು ಮಹಿಳೆಯರ ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.