Saturday, April 19, 2025
Google search engine

Homeರಾಜ್ಯಸುದ್ದಿಜಾಲಬೇಬಿ ಮಠ ಮತ್ತು ಚಂದ್ರಮನ ಆಶ್ರಮದ ಪೀಠಾಧಿಪತಿ ಶ್ರೀ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳ...

ಬೇಬಿ ಮಠ ಮತ್ತು ಚಂದ್ರಮನ ಆಶ್ರಮದ ಪೀಠಾಧಿಪತಿ ಶ್ರೀ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳ ಜನ್ಮದಿನೋತ್ಸವ ಆಚರಣೆ

ಶ್ರೀರಂಗಪಟ್ಟಣ:ದಿನಾoಕ ೦೩-೦೮-೨೦೨೩ರ ಗುರುವಾರದಂದು ಬೇಬಿಮಠ ಮತ್ತು ಚಂದ್ರವನ ಆಶ್ರಮದ ಪೀಠಾಧಿಪತಿಗಳಾದ ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳವರ ೪೮ನೇ ವರ್ಷದ ಜನ್ಮದಿನೋತ್ಸವವನ್ನು ಭಕ್ತರ ಸಮ್ಮುಖದಲ್ಲಿ ಸರಳವಾಗಿ ಆಚರಿಸಲಾಯಿತು.
ಶ್ರೀಗಳು ಭಕ್ತರನ್ನುದ್ದೇಶಿಸಿ, ಮನುಷ್ಯ ಸಂಪಾದನೆ ಮಾಡುತ್ತಾನೆ. ಅದೇ ಪ್ಲಸ್ ಎನ್ನುವುದು. ನಮ್ಮ ಸಮಯವೇ ಇಂದು ಮೈನಸ್ ಆಗಿದೆ. ಸಾವಿರಾರು ಕೋಟಿ ಕೊಟ್ಟರೂ ಸಮಯ ದೊರೆಯುವುದಿಲ್ಲ. ಒಂದು ಸೆಕೆಂಡ್ ಸಮಯ ಕಳೆದು ಹೋದರೂ ಅದನ್ನು ಹಿಂದಿರುಗಿ ಕೊಡಲು ಯಾರಿಂದಲೂ ಸಾಧ್ಯವಿಲ್ಲ. ಈ ಸಮಯವೆನ್ನುವುದು ನಮಗೆ ಭಗವಂತ ಕೊಟ್ಟಿರುವ ಕೊಡುಗೆಯಾಗಿದೆ. ಬದುಕಿರುವ ಒಂದು ಪ್ರತಿಕ್ಷಣವೂ ಸಮಾಜಕ್ಕಾಗಿ, ದೇಶಕ್ಕಾಗಿ ತೊಡಗಿಸಿಕೊಳ್ಳಬೇಕೆಂಬುದೇ ನಮ್ಮ ಆಶಯವಾಗಿದೆ. ನಾನು ಬದುಕಿರುವ ಸಮಯದವರೆಗೂ ಸಮಾಜಕ್ಕಾಗಿ ಸೇವೆಯನ್ನು ಮಾಡಬೇಕೆಂದು ಧ್ಯೇಯವನ್ನು ಇಟ್ಟುಕೊಂಡಿದ್ದೇನೆ. ನನಗೆ ದೊರೆತಿರುವ ಸಂಪತ್ತೆoದರೆ ಅದು ನಮ್ಮ ಹಿರಿಯ ಶ್ರೀಗಳವರಾದ ಶ್ರೀ ಶ್ರೀ ಮರಿದೇವರು ಶಿವಯೋಗಿ ಮಹಾಸ್ವಾಮಿಗಳವರ ಆಶೀರ್ವಾದ. ಈ ಸಂಪತ್ತಿಗೆ ಸಾಟಿಯಾಗಿ ಈ ಜಗತ್ತಿನೊಳಗೆ ಯಾವುದೂ ಇಲ್ಲ. ಈ ಎಲ್ಲಾ ಸಂಪತ್ತಿಗೆ ಕಾರಣವೆಂದರೆ, ನಾನು ಮೊದಲಿನಿಂದಲೂ ಆರಾಧಿಸುತ್ತಿರುವ ದುರ್ಗಾ ಮಾತೆ ಮತ್ತು ಹಿರಿಯ ಶ್ರೀಗಳು. ಭಕ್ತರೇ ನಮ್ಮ ಮಠದ ದೊಡ್ಡ ಸಂಪತ್ತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರು ಮತ್ತು ಹಾಲಿ ಶಾಸಕರಾದ ಜಿ.ಟಿ. ದೇವೆಗೌಡರವರು ಎಲ್ಲರನ್ನುದ್ದೇಶಿಸಿ, ತ್ರಿನೇತ್ರ ಶ್ರೀಗಳು ನಿರಂತರವಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸಂಚಾರ ಮಾಡಿ ಈ ಪುಣ್ಯಭೂಮಿಯ ಮಹಿಮೆಯನ್ನು ಸಾರುತ್ತಿದ್ದಾರೆ. ಗುರುಗಳಾಗಿ ಪಟ್ಟಾಧಿಕಾರವನ್ನು ವಹಿಸಿಕೊಂಡು ಜನವರಿ ೨೦೨೪ನೇ ಇಸವಿಗೆ ೨೫ ವರ್ಷಗಳಾಗುತ್ತವೆ. ಈ ೨೫ ವರ್ಷದಲ್ಲಿ ಶ್ರೀಮಠವನ್ನು ಬಹಳ ಎತ್ತರಕ್ಕೆ ಬೆಳೆಸಿದ್ದಾರೆ. ಇಲ್ಲಿ ನಾನಾ ರೀತಿಯ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ನಡೆದಿವೆ. ಭಕ್ತರಿಗೆ ಏನೇ ಕಷ್ಟ ಬಂದರೂ ಶ್ರೀಗಳು ಅದಕ್ಕೆ ಸ್ಪಂದಿಸಿ ಎಲ್ಲಾ ಬಾಧೆ ನಿವಾರಿಸಿ ಅವರ ಕ್ಷೇಮ ಮತ್ತು ಶ್ರೇಯಸ್ಸನ್ನು ಬಯಸುತ್ತಾರೆ.
ಈ ಸುಸಂದರ್ಭದಲ್ಲಿ ಮೈಸೂರಿನ ಜಪದಕಟ್ಟೆ ಮಠದ ಡಾ. ಶ್ರೀ ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ತೆಂಡೆಕೆರೆಯ ರಂಭಾಪುರಿ ಪೀಠದ ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮಿಗಳು, ಡಾ. ಶ್ರೀ ಮೂಗೂರು ಮಧು ದೀಕ್ಷಿತ್, ರಾಮನಗರದ ಅಪರ ಜಿಲ್ಲಾಧಿಕಾರಿಗಳಾದ ಬಿ.ಸಿ. ಶಿವಾನಂದಮೂರ್ತಿ, ಶ್ರೀರಂಗಪಟ್ಟಣದ ತಹಸೀಲ್ದಾರ್ ಶ್ರೀಮತಿ ಅಶ್ವಿನಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಎನ್. ರಾಮು, ಮೈಸೂರಿನ ಸುಯೋಗ್ ಆಸ್ಪತ್ರೆಯ ಅಧ್ಯಕ್ಷರಾದ ಎಸ್.ಪಿ. ಯೋಗಣ್ಣ, ಮಂಡ್ಯ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸಿ. ಅಶೋಕ್, ಡಾ.ಪದ್ಮಾಶೇಖರ್, ಶ್ರೀಮಠದ ಕಾರ್ಯದರ್ಶಿಗಳಾದ ಟಿ.ಪಿ. ಶಿವಕುಮಾರ್‌ರವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular