ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಇಂದು ಶುಕ್ರವಾರ ನವಜಾತ ಶಿಶು ಪತ್ತೆಯಾಗಿದೆ.
ಆಸ್ಪತ್ರೆಯ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯದ ಪಕ್ಕ ಬೆಳಿಗ್ಗೆ ಹೆಣ್ಣು ಶಿಶು ಬಿದ್ದಿರುವುದು ಕಂಡು ಬಂದಿದೆ. ಸ್ಥಳೀಯರು ಇದನ್ನು ಗಮನಿಸಿ ಆಸ್ಪತ್ರೆ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಮಗು ಮೃತಪಟ್ಟಿದ್ದು, ಜನಿಸಿ ಒಂದು ಅಥವಾ ಎರಡು ದಿನ ಆಗಿರಬಹುದು ಎಂದು ಆಸ್ಪತ್ರೆಯ ಡಾ.ಶ್ರೀಧರ್ ತಿಳಿಸಿದ್ದಾರೆ. ಆದರೆ ಮಗುವಿನ ತಂದೆ-ತಾಯಿ ಯಾರೆಂದು ಪತ್ತೆಯಾಗಿಲ್ಲ.