ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ದಕ್ಷಿಣ ಭಾರತದಲ್ಲಿ ತನ್ನದೇ ಆದ ಇತಿಹಾಸ ಹೊಂದಿರುವ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಶ್ರೀರಾಮ ದೇವರ ಬ್ರಹ್ಮರಥೋತ್ಸವ ಶುಕ್ರವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಮತ್ತು ಸಂಭ್ರಮದಿಂದ ಜರುಗಿತು.
ಬೆಳಿಗ್ಗೆ ಸುಮಾರು 11.30 ಸಮಯದಲ್ಲಿ ಶ್ರೀರಾಮ ದೇವಾಲಯದಿಂದ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಅವುಗಳನ್ನು ಮೆರವಣಿಗೆಯಲ್ಲಿ ಶಾಸಕ ಡಿ.ರವಿಶಂಕರ್ ಅವರ ನೇತೃತ್ವದಲ್ಲಿ ವೇದ ಘೋಷಗಳೊಂದಿಗೆ ಲಕ್ಷಾಂತರ ಮಂದಿಯ ಸಮ್ಮುಖದಲ್ಲಿ ರಥಕ್ಕೆ ತಂದು ಪ್ರತಿಷ್ಠಾಪನೆ ಮಾಡಲಾಯಿತು.
12 ಗಂಟೆಯ ಸಮಯದಲ್ಲಿ ಆದಿಚುಂಚನಗಿರಿ ಮೈಸೂರು ಶಾಖ ಮಠದ ಸೋಮನಾಥೇಶ್ವರ ಸ್ವಾಮಿಜಿ, ಸೋಮನಾಥ ಸ್ವಾಮಿಜಿ, ಗಾವಡಗೆರೆ ಜಂಗಮ ದೇವರ ಮಠದ ನಟರಾಜ ಶ್ರೀ, ಬೆಟ್ಟದಪುರದ ವಿರುಕ್ತ ಮಠದ ಚನ್ನಬಸವ ದೇಶಿಕೇಂದ್ರಿ ಸ್ವಾಮಿಜಿ ಅವರ ಸಾನಿಧ್ಯದಲ್ಲಿ ಶಾಸಕ ಡಿ.ರವಿಶಂಕರ್ ಮತ್ತು ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ದೊಡ್ಡ ಸ್ವಾಮೀಗೌಡ ಅವರು ಜಂಟಿಯಾಗಿ ಚಾಲನೆ ನೀಡಿದರು.
ನಂತರ ಇಲ್ಲಿ ನೆರೆದಿದ್ದ ಶ್ರೀರಾಮನ ಭಕ್ತರು ದೇವರಿಗೆ ಜಯಕಾರ ಕೂಗಿ ರಥವನ್ನು ದೇವಾಲಯದ ಸುತ್ತು ಶ್ರೀರಾಮನ ಪಾದಕೆ ಗೋವಿಂದ, ಜೈ ಶ್ರೀರಾಮ್ ಎಂದು ಭಕ್ತಿ ಘೋಷಣೆಯೊಂದಿಗೆ ಒಂದು ಸುತ್ತು ಎಳೆದಾಗ ಈ ಅಭೂತಪೂರ್ವ ದೃಶ್ಯವನ್ನು ಕಣ್ಣುಂಬಿ ಕೊಂಡ ಭಕ್ತ ಸಾಗರ ಭಾವ ಪರವಶವಾಯಿತು.
ರಥವು ದೇವಾಲಯದ ಸುತ್ತುವಾಗ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಮತ್ತು ಸ್ಥಳೀಯ ಭಕ್ತಗಣ ದೇವರಿಗೆ ಬಾಳೆಹಣ್ಣು, ಜವನ ಎಸೆದು ತಮ್ಮ ಭಕ್ತಿ ಭಾವ ಸಮರ್ಪಿಸಿದರು. ನವ ವಧು-ವರರು ಭಾಗವಹಿಸಿದ್ದು ಅಲ್ಲದೇ ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ಸೀತಾ ಸಮೇತ ಶ್ರೀರಾಮ ಮತ್ತು ಲಕ್ಷಣ ದೇವರ ದರ್ಶನ ಪಡೆದರು.
ರಥೋತ್ಸವಕ್ಕೆ ಆಗಮಿಸಿದ್ದ ಕೆಲವರು ದೇವಾಲಯದ ಆವರಣದಲ್ಲಿ ಅಡುಗೆ ಮಾಡಿ ಭಕ್ತರಿಗೆ ಉಣ ಬಡಿಸಿ ತಮ್ಮ ಹರಕೆ ತೀರಿಸಿದರು. ಇದರ ಜತೆಗೆ ಬಸವನ ವೃತ್ತದಿಂದ ಶ್ರೀರಾಮ ದೇವಾಲಯದವರೆಗೆ ರಸ್ತೆಯ ಎರಡೂ ಬದಿಯಲ್ಲಿ ಹಾಕಿರುವ ಸಿಹಿತಿಂಡಿ ಮತ್ತು ವಿವಿಧ ಆಟಿಕೆಯ ಅಂಗಡಿಗಳು ಮನ ಸೆಳೆದವು.

ರಥೋತ್ಸವದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಾಜಿ ಸದಸ್ಯ ಚಂದ್ರಶೇಖರ್, ಮಹದೇವಸ್ವಾಮಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಉದಯಶಂಕರ್, ಎಂ.ಎಸ್.ಮಹದೇವ್, ಟೌನ್ ಅಧ್ಯಕ್ಷ ಪ್ರಭಾಕರ್, ವಕ್ತಾರ ಸಯದ್ ಜಾಬೀರ್, ಪಿಎಲ್ ಡಿ ಬ್ಯಾಂಕ್ ಮಾಜಿ ನಿರ್ದೇಶಕ ಗಂಧನಹಳ್ಳಿ ಹೇಮಂತ್, ಎಂಪಿಎಂಸಿ ಮಾಜಿ ಅಧ್ಯಕ್ಷ ನಾಗೇಂದ್ರ, ಒಕ್ಕಲಿಗರ ಸಂಘದ ಹೆಬ್ಬಾಳು ಪರುಶುರಾಮ್, ಟಿಎಪಿಸಿಎಂ ಮಾಜಿ ನಿರ್ದೇಶಕಿ ನೇತ್ರಾವತಿ, ಕಾಂಗ್ರೇಸ್ ಮುಖಂಡ ಚೀರನಹಳ್ಳಿ ಆನಂದ್ , ಕುಪ್ಪೆ ಗ್ರಾ.ಪಂ.ಅಧ್ಯಕ್ಷೆ ಶಾರದಮ್ಮ, ಸದಸ್ಯೆ ಗೌರಮ್ಮ, ಹಳಿಯೂರು ಗ್ರಾ.ಪಂ.ಉಪಾಧ್ಯಕ್ಷ ನೂತನ್ ಗೌಡ, ಮುಖಂಡರಾದ ಡೈರಿ ಮಾದು, ಹನಸೋಗೆ ನವೀನ್, ಹಳಿಯೂರು ಪ್ರಭಾರ್, ಎಚ್.ಅರ್.ಪರುಶುರಾಮ್, ಸರಿತಾ ಜವರಪ್ಪ,ವಂದನಾ, ಉಷಾ , ದಮ್ಮನಹಳ್ಳಿ ಪಾಲಕ್ಷ, ಟೈಲರ್ ರಾಚಪ್ಪ ,ಸಾಲಿಗ್ರಾಮ ತಹಸೀಲ್ದಾರ್ ರುಕಿಯಾ ಬೇಗಂ, ತಾ.ಪಂ.ಇಓ ರವಿಕುಮಾರ್, ಉಪತಹಸೀಲ್ದಾರ್ ಮಹೇಶ್, ರಾಜಸ್ವ ನಿರೀಕ್ಷ ಚಿದನಂದ್ ಬಾಬು, ಗ್ರಾಮ ಅಧಿಕಾರಿಗಳಾದ ಮೇಘನಾ, ಮೌನೇಶ್, ಕಾವೇರಿ , ಪ್ರೀಯಾ,ಸುನೀಲ್, ಸಯ್ಯದ್, ,ಪಾರುಪತ್ತೆದಾರ ರಾದ ಯತೀರಾಜ್, ನಾಡಕಚೇರಿಯ ಭಾಗ್ಯ ಕೆಸ್ತೂರು ವಿಜಿ, ಅರ್ಚಕರಾದ ವಾಸುದೇವನ್,ನಾರಾಯಣ್ ಅಯ್ಯಂಗಾರ್ ಸೇರಿದಂತೆ ಲಕ್ಷಾಂತರ ಮಂದಿ ಮತ್ತಿತರರು ಹಾಜರಿದ್ದರು.
ಶ್ರೀರಾಮ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶಾಸಕ ಡಿ.ರವಿಶಂಕರ್ ಮತ್ತು ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ದೊಡ್ಡಸ್ವಾಮೇಗೌಡ ಏರ್ಪಡಿಸಿದ್ದ ಅನ್ನ ಸಂತರ್ಪಣೆ ಏರ್ಪಡಿಸಿದ್ದರು.

ಅಲ್ಲದೇ ಉದ್ಯಮಿ ಹಳಿಯೂರು ಮಧುಚಂದ್ರ ಮತ್ತು ಜೆಡಿಎಸ್ ಮುಖಂಡ ಎಚ್.ಕೆ.ಶ್ರೀಧರ್ ಮಜ್ಜಿಗೆ ಪಾನಕ ಜತಗೆ ವಿತರಿಸಿದರು.

ಭಾರೀ ಪೊಲೀಸ್ ಭದ್ರತೆ
ಚುಂಚನಕಟ್ಟೆ ಜಾತ್ರೆಗೆ ಬೆಳಗ್ಗೆಯಿಂದ ಸಂಜೆಯವರೆಗೆ 1 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರಿಂದ ಮೈಸೂರು ಗ್ರಾಮಾಂತರ ಡಿವೈಎಸ್ಪಿ ರಾಜಣ್ಣ, ಸಾಲಿಗ್ರಾಮ ನಿರೀಕ್ಷಕ ಶಶಿಕುಮಾರ್ ,ಕೆ.ಆರ್.ನಗರ ವೃತ್ತ ನಿರೀಕ್ಷಕ ಶಿವಪ್ರಕಾಶ್ ನೇತೃತ್ವದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಬಾರ್ ಗಳು ಬಂದ್
ರಥೋತ್ಸವ ಯಶಸ್ವಿಯಾಗಿ ನಡೆಯುವುದು ಮತ್ತು ಯಾವುದೇ ಅಹಿತಕರ ಘಟನೆ ನಡೆಯುವುದನ್ನ ತಪ್ಪಿಸಲು ಇದೇ ಪ್ರಥಮಬಾರಿಗೆ ಚುಂಚನಟ್ಟೆ ಮತ್ತು ಹೊಸೂರು ಗ್ರಾಮದಲ್ಲಿರುವ ಬಾರ್ ಗಳನ್ನು ಶಾಸಕ ಡಿ.ರವಿಶಂಕರ್ ಅವರ ಸೂಚನೆಯ ಮೇರೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳ ಬಂದ್ ಮಾಡಿಸಿದ್ದರು.



