ಮಂಡ್ಯ: ರಾಸುಗಳ ಕಿಚ್ಚು ಹಾಯಿಸುವಾಗ ರೈತ ಎಡವಿ ಬಿದ್ದಿದ್ದು, ಎತ್ತು ಆತನನ್ನು ತುಳಿಯದೆ ಜಿಗಿದಿದ್ದು, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ಮಂಡ್ಯ ತಾಲೂಕಿನ ದ್ಯಾಪಸಂದ್ರ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದ ರೈತ ಬಿದರಕೋಟೆ ಮಹೇಶ್ ನಿನ್ನೆ ಸಂಜೆ ಕಿಚ್ಚು ಹಾಯಿಸುವ ವೇಳೆ ಎಡವಿಬಿದ್ದಿದ್ದಾನೆ.

ರೈತ ಮಹೇಶ್ ಎಡವಿದರೂ ಆತನನ್ನ ತುಳಿಯದ ಎತ್ತು, ಹಿಂದಿನಿಂದ ಕಿಚ್ಚು ಹಾಯ್ದು ಬಂದಿದೆ. ಮನುಷ್ಯ ಎಡವಿದ್ರೂ ಪ್ರಾಣಿ ಎಡವಿಲ್ಲ ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.