ಪಿರಿಯಾಪಟ್ಟಣ: ಎತ್ತಿನ ಗಾಡಿ ಸಗಣಿ ಗುಂಡಿಗೆ ಬಿದ್ದಿದ್ದರಿಂದ ಒಂದು ಎತ್ತು ಸ್ಥಳದಲ್ಲಿ ಸಾವನ್ನಪ್ಪಿ ಮತ್ತೊಂದು ಎತ್ತಿಗೆ ಚಿಕಿತ್ಸೆ ನೀಡಿರುವ ಘಟನೆ ತಾಲೂಕಿನ ಬೂದಿತಿಟ್ಟು ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಕೃಷಿಕ ಮಹಿಳೆ ಸರೋಜಮ್ಮ ಎಂಬುವರಿಗೆ ಸೇರಿದ ಒಂದು ಎತ್ತು ಸಾವನಪ್ಪಿದ್ದು ಮತ್ತೊಂದು ಎತ್ತಿಗೆ ಚಿಕಿತ್ಸೆ ನೀಡಲಾಗಿದೆ, ಜಮೀನಿನಿಂದ ಜೋಳದ ಕಡ್ಡಿ ತುಂಬಿಕೊಂಡು ಮನೆಗೆ ಬರುವಾಗ ನಿಯಂತ್ರಣ ತಪ್ಪಿ ಮನೆ ಬಳಿಯ ಸಗಣಿ ಗುಂಡಿಗೆ ಬಿದ್ದು ಘಟನೆ ಜರುಗಿದೆ. ಎತ್ತು ಸಾವನ್ನಪ್ಪಿರುವುದರಿಂದ ನಷ್ಟ ಉಂಟಾಗಿದ್ದು ಪರಿಹಾರಕ್ಕೆ ರೈತ ಮಹಿಳೆ ಸರೊಜಮ್ಮ ಹಾಗೂ ಸ್ಥಳೀಯರು ಮನವಿ ಮಾಡಿದ್ದಾರೆ.
ವಿಷಯ ತಿಳಿದು ಘಟನೆ ಸ್ಥಳಕ್ಕೆ ಕಂಪಲಾಪುರ ಪಶು ವೈದ್ಯಾಧಿಕಾರಿ ಡಾ. ಮಧುಸೂಧನ್ ಭೇಟಿ ನೀಡಿ ಸಾವನಪ್ಪಿದ ಎತ್ತಿನ ಮರಣೋತ್ತರ ಪರೀಕ್ಷೆ ನಡೆಸಿ ಮತ್ತೊಂದು ಎತ್ತಿಗೆ ಚಿಕಿತ್ಸೆ ನೀಡಿ ಪರಿಹಾರಕ್ಕೆ ಮುಂದಿನ ಕ್ರಮ ಕೈಗೊಂಡಿದ್ದಾರೆ.