Saturday, April 19, 2025
Google search engine

Homeರಾಜಕೀಯಅಕ್ಕಿ ಖರೀದಿ ಬಗ್ಗೆ ಕೇಂದ್ರ ಸರ್ಕಾರ ಕೊಟ್ಟ ಮಾತು ತಪ್ಪುತ್ತಿದೆ: ಸಂತೋಷ್ ಲಾಡ್ ಬೇಸರ

ಅಕ್ಕಿ ಖರೀದಿ ಬಗ್ಗೆ ಕೇಂದ್ರ ಸರ್ಕಾರ ಕೊಟ್ಟ ಮಾತು ತಪ್ಪುತ್ತಿದೆ: ಸಂತೋಷ್ ಲಾಡ್ ಬೇಸರ

ಹುಬ್ಬಳ್ಳಿ: ಕೇಂದ್ರ ಸರ್ಕಾರವು 5 ಕೆಜಿ ಅಕ್ಕಿ ಖರೀದಿ ಬಗ್ಗೆ ಮಾತು ಕೊಟ್ಟಿತ್ತು. ಈ ಕಾರ್ಯಕ್ರಮ ಯಶಸ್ವಿ ಆಗಬಾರದೆಂದು ಈಗ ಅದನ್ನು ಹಿಂದೆ ಪಡೆದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ ಎಂದರು.

ಕೇಂದ್ರ ಸರ್ಕಾರವನ್ನು ಕೇಳಿ ಗ್ಯಾರಂಟಿ ಘೋಷಣೆ ಮಾಡಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತ, ಪತ್ರದ ಮೂಲಕ ಅವರು ತಾನೇ ಮಾತುಕೊಟ್ಟಿದ್ದು. ಕಳೆದ ಬಾರಿ ಬಿಜೆಪಿಯು ತನ್ನ ಪ್ರಣಾಳಿಕೆಯನ್ನು ಕೇಂದ್ರಕ್ಕೆ ಕೇಳಿ ಕೊಟ್ಟಿತ್ತಾ? ಪ್ರಣಾಳಿಕೆ ಕೊಡುವಂತದ್ದು ಆಯಾ ರಾಜ್ಯಕ್ಕೆ ಸಂಬಂಧಪಟ್ಟಿದ್ದು. ಕೇಂದ್ರದವರು ಮಾತುಕೊಟ್ಟು ವಾಪಸ್ಸು ಪಡೆದ ಉದ್ದೇಶ ಏನು? ನಾವು ನೀಡಿದ ಕಾರ್ಯಕ್ರಮ ಯಶಸ್ವಿ ಆಗಬಾರದೆಂಬ ಉದ್ದೇಶ ಅವರದ್ದಿದೆ. ಕರ್ನಾಟಕ ಅಷ್ಟೇ ಅಲ್ಲದೇ ಇಡೀ ದೇಶದ ಜನತೆ ನೋಡುತ್ತಿದೆ. ಅಕ್ಕಿಗಾಗಿ ಮುಖಂಡರು, ಕಾರ್ಯಕರ್ತರೊಂದಿಗೆ ನಾಳೆ ಪ್ರತಿಭಟನೆ ಮಾಡುತ್ತೇವೆ ಎಂದರು.

ಶಕ್ತಿ ಯೋಜನೆ ಬಿಟ್ಟು ಉಳಿದ ನಾಲ್ಕು ಯೋಜನೆಗಳಲ್ಲಿ ಗೊಂದಲ ಇದೆಯಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಗೊಂದಲ ಇಲ್ಲ. ಸುಮಾರು 60 ಸಾವಿರ ಕೋಟಿ ರೂ.  ವೆಚ್ಚದಲ್ಲಿ ಆಗುತ್ತಿರುವ ಕಾರ್ಯಕ್ರಮ ಅದು. ಅದನ್ನು ಅನುಷ್ಠಾನಕ್ಕೆ ತರುವುದಕ್ಕೆ ನಾವು ಸಮಯ ನಿಗದಿ ಪಡಿಸಿದ್ದೇವೆ ಎಂದರು.

ಕೈಗಾರಿಕೋದ್ಯಮಿಗಳು ವಿದ್ಯುತ್ ಬಿಲ್ ಹೆಚ್ಚಳಕ್ಕೆ ಬಂದ್ ಕರೆ ನೀಡಿದ್ದಾರಲ್ಲ ಎಂದಾಗ, ಮುಂದಿನ ದಿನಗಳಲ್ಲಿ ಸರ್ಕಾರ ಇದರ ಬಗ್ಗೆ ಚರ್ಚೆ ಮಾಡುತ್ತದೆ ಎಂದರು.

RELATED ARTICLES
- Advertisment -
Google search engine

Most Popular