Tuesday, October 14, 2025
Google search engine

Homeರಾಜ್ಯಸುದ್ದಿಜಾಲಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಾಣಾರ್ಪಣೆ ಗೈದ ಬಾಲ ಹುತಾತ್ಮರ ಇತಿಹಾಸ ಪಠ್ಯಗಳಲ್ಲಿ ಬೋಧನೆಯಾಗಲಿ - ಸುರೇಶ್ ಎನ್...

ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಾಣಾರ್ಪಣೆ ಗೈದ ಬಾಲ ಹುತಾತ್ಮರ ಇತಿಹಾಸ ಪಠ್ಯಗಳಲ್ಲಿ ಬೋಧನೆಯಾಗಲಿ – ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಾಣಾರ್ಪಣೆ ಗೈದ ಬಾಲ ಹುತಾತ್ಮರ ಜೀವನ ಚರಿತ್ರೆಗಳನ್ನು ಪಠ್ಯಗಳಲ್ಲಿ ಬೋಧಿಸುವಂತಹ, ಇತಿಹಾಸವನ್ನು ತಿಳಿಸುವ ಹಾಗೂ ದೇಶಕ್ಕಾಗಿ ಅರ್ಪಿಸಿಕೊಳ್ಳುವ ಮಾನಸಿಕತೆಯನ್ನು ಬೆಳೆಸುವ ಕಾರ್ಯವಾಗಬೇಕು ಎಂದು ಇತಿಹಾಸಕಾರ, ಸಂಸ್ಕೃತಿ ಚಿಂತಕ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂಥ್ ಕ್ಲಬ್ ಹಮ್ಮಿಕೊಂಡಿದ್ದ ಬಾಲ ಹುತಾತ್ಮ ರಾಜಿ ರೌತ್ ರವರ ಪುಣ್ಯ ದಿನದಲ್ಲಿ ಮಾತನಾಡುತ್ತಾ ಒರಿಸ್ಸಾ ರಾಜ್ಯದ ಬಾಲಕ ತನ್ನ ಹನ್ನೆರಡು ವರ್ಷದಲ್ಲಿಯೇ ಬ್ರಿಟಿಷರ ದೌರ್ಜನ್ಯವನ್ನು ವಿರೋಧಿಸಿ ಗುಂಡಿಗೆ ಬಲಿಯಾಗಿ ಪ್ರಾಣಾರ್ಪಣೆ ಮಾಡಿಕೊಂಡ ತ್ಯಾಗಿ. ದೋಣಿ ಹಾಯಿಸುವ ಕಾಯಕದಲ್ಲಿದ್ದ ರೌತ್ ತನ್ನ ಗ್ರಾಮಕ್ಕೆ ಬ್ರಿಟಿಷ್ ಅಧಿಕಾರಿಗಳು ಮತ್ತು ಪೊಲೀಸರು ಆಗಮಿಸಿ ಕ್ರೌರ್ಯವನ್ನು, ದೌರ್ಜನ್ಯವನ್ನು ಎಸ್ಸಂ ಭವವನ್ನು ಬಾಲ್ಯದಲ್ಲಿಯೇ ಗಮನಿಸಿ ಪೊಲೀಸರನ್ನು ದೋಣಿಯಲ್ಲಿ ಕರೆದೊಯಲು ನಿರಾಕರಿಸಿದ ರಾಷ್ಟ್ರವೀರ. ದೇಶದ ಸ್ವಾತಂತ್ರ ಕ್ಕಾಗಿ ವೀರ ಮರಣ ಹೊಂದಿದ ಸಮಗ್ರ ಇತಿಹಾಸ ಹೊರ ತರಬೇಕು ಎಂದರು.

ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ದೊಡ್ಡಮೋಳೆ ಮಾತನಾಡಿ ಭಾರತದ ಸ್ವಾತಂತ್ರ್ಯ ಹೋರಾಟದ ಮೂಲಕ ಬಂದಿದೆ. ಲಕ್ಷಾಂತರ ವೀರರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ದೇಶದ ಏಳಿಗೆಗೆ ನಾವೆಲ್ಲರೂ ಶ್ರಮಿಸೋಣ. ಪ್ರತಿ ವ್ಯಕ್ತಿಯು ನಿಷ್ಠೆಯಿಂದ ಸೇವೆ ಸಲ್ಲಿಸುವ ಗುಣ ಅಳವಡಿಸಿಕೊಳ್ಳೋಣ ಎಂದರು.

ಉಪನ್ಯಾಸಕ ರಮೇಶ ಕೊಳ್ಳೇಗಾಲ ಮಾತನಾಡಿ ಜೈಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ಸಾವಿರಾರು ರಾಷ್ಟ್ರ ಭಕ್ತರ ಕಾರ್ಯಕ್ರಮ ರೂಪಿಸಿ. ಜಾಗೃತಿ ಮೂಡಿಸಿ ಅರಿವು ಉಂಟುಮಾಡಿ ವೀರರ ಇತಿಹಾಸ ತಿಳಿಸುವ ಪ್ರಯತ್ನ ಮೆಚ್ಚುವಂತದ್ದು. ಸಾವಿರಾರು ರಾಷ್ಟ್ರ ವೀರರ ಇತಿಹಾಸ ಸಮಾಜಕ್ಕೆ ಗೊತ್ತಿಲ್ಲ. ತಿಳಿಸುವ ಕಾರ್ಯ ಆಗಲಿ ಎಂದರು.

ಮಕ್ಕಳಾದ ಪ್ರೀತು, ಅರ್ಜುನ್,ಮಹೇಂದ್ರ, ಭಗತ್,ಶಿವು, ಲಿಂಗರಾಜು,ಸುದೀಪ್, ಸಂಜು ಇದ್ದರು.

RELATED ARTICLES
- Advertisment -
Google search engine

Most Popular