ಚಿತ್ರದುರ್ಗ : ಮುಡಾ ಹಗರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ 14 ಸೈಟ್ ಗಳ ಬೆಲೆ ರೂ.62 ಕೋಟಿ ರೂಪಾಯಿ ಕೊಡಿ ಎಂದು ಹೇಳಿಕೆ ನೀಡಿದ್ದರು.ಈ ಹೇಳಿಕೆಯನ್ನು ಅವರ ಹಿಂಬಾಲಕರಿಂದ ಕೇಳಿ ಹೇಳಿದ್ದರಿಂದ ಹಾಗಾಗಿ ಅವರ ಹಿಂಬಾಲಕರೇ ಅವರಿಗೆ ಖೆಡ್ಡಾ ತೋಡಿದ್ದಾರೆ ಎಂದು ಆರ್ ಅಶೋಕ್ ಹೇಳಿಕೆ ನೀಡಿದರು.
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದ ಸೈಟ್ ಬೆಲೆ 80 ರಿಂದ 90 ಲಕ್ಷ ಎಂದೇ ಭಾವಿಸಿದ್ದೆವು. ಸಿಎಂ ಹಿಂದೆ ಇದ್ದ ವ್ಯಕ್ತಿ ಹೇಳಿದ್ದು ಕೇಳಿ 62 ಕೋಟಿ ಎಂದಿದ್ದರು ಸಿಎಂ ಸಿದ್ದರಾಮಯ್ಯ ಹಿಂಬಾಲಕರೇ ಅವರಿಗೆ ಖೆಡ್ಡಾ ತೋಡಿದ್ದಾರೆ ಎಂದು ಹೇಳಿಕೆ ನೀಡಿದರು.
ದಸರಾ ಆಚರಣೆಯಲ್ಲಿ ಚಾಮುಂಡೇಶ್ವರಿಗೆ ಅಪಮಾನ ಮಾಡಿದ್ದಾರೆ.ಸರ್ಕಾರ ಪತನ ರಾಜೀನಾಮೆ ಬಗ್ಗೆ ಭಾಷಣ ಮಾಡಿದ್ದಾರೆ. ದಸರಾ ಉದ್ಘಾಟಿಸಿದ್ದು ಸಾಹಿತಿಯೋ ಯಾರೋ ನನಗೆ ಗೊತ್ತಿಲ್ಲ. ದಸರಾ ಉದ್ಘಾಟಕರು ಕೇಂದ್ರವನ್ನು ಟೀಕಿಸಿ ಭಾಷಣ ಮಾಡಿದ್ದಾರೆ. ಚಾಮುಂಡಿ ದೇವಿಯ ಆರಾಧನೆ ಮೈಸೂರು ಸಂಸ್ಕೃತಿ ಮರೆತು ರಾಜಕೀಯ ಮಾಡಿದ್ದಾರೆ.ಮುಡಾ ಹಗರಣ ಪ್ರಸ್ತಾಪ ಮಾಡಿದ್ದು, ಯಾರು? ಜ್ಞಾನ ಇರಬೇಕು ಅಲ್ವಾ ಎಂದು ಕಿಡಿ ಕಾರಿದ್ದಾರೆ.