ಪಿರಿಯಾಪಟ್ಟಣ:ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರುವುದು ಭಾರತೀಯರಾದ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಾರ್ವತಿ ಕರತಾಳು ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಗಡಿಯ ಸಾಲಿಗ್ರಾಮ ತಾಲೂಕಿನ ಕರತಾಳು ಗ್ರಾಮದ ಮನೆ ಮನೆಗೆ ಶ್ರೀರಾಮ ಮಂತ್ರಾಕ್ಷತೆ ವಿತರಿಸಿ ಅವರು ಮಾತನಾಡಿದರು.ಜ.22ರಂದು ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯ ನಡೆಯುವುದರ ಅಂಗವಾಗಿ ದೇಶದಾದ್ಯಂತ ಮಂತ್ರಾಕ್ಷತೆ ವಿತರಿಸುವ ಕಾರ್ಯ ನಡೆಯುತ್ತಿದೆ.
ನಾವು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಗರದಲ್ಲಿ ವಾಸಿಸುತ್ತಿದ್ದು ಅಲ್ಲಿ ಸ್ಥಳೀಯವಾಗಿ ಪ್ರತಿ ಮನೆಮನೆಗೂ ಮಂತ್ರಾಕ್ಷತೆ ವಿತರಿಸಿದ್ದು ನಮ್ಮ ಪತಿ ಸಂತೋಷ್ ಅವರು ಕರತಾಳು ಗ್ರಾಮದವರಾಗಿದ್ದು ಇಲ್ಲಿನ ಪ್ರತಿ ಮನೆಮನೆಗೂ ಮಂತ್ರಾಕ್ಷತೆ ವಿತರಿಸಬೇಕೆಂಬ ಉದ್ದೇಶದಿಂದ ಕೆ.ಆರ್ ನಗರ ಶಾಖೆಯಲ್ಲಿ ಮಂತ್ರಾಕ್ಷತೆ ಹಾಗೂ ಆಹ್ವಾನ ಪತ್ರಿಕೆ ಪಡೆದು ಪ್ರತಿ ಮನೆಮನೆಗೆ ವಿತರಿಸಲಾಗುತ್ತಿದೆ, ಇದೊಂದು ಬೃಹತ್ ಹಿಂದೂ ಧಾರ್ಮಿಕ ಕಾರ್ಯವಾಗಿರುವುದರಿಂದ ನಮ್ಮ ಕೈಲಾದ ಸೇವೆ ಮಾಡುತ್ತಿದ್ದು ಪ್ರತಿಯೊಬ್ಬರು ಧರ್ಮ ಹಾಗೂ ರಾಷ್ಟ್ರ ಉಳಿಸುವಲ್ಲಿ ಮುಂದಾಗಬೇಕು ಎಂದರು.ಈ ಸಂದರ್ಭ ಕರತಾಳು ಗ್ರಾಮದ ಪ್ರದೀಪ್ ಕೃಷ್ಣ, ಲಾವಣ್ಯ, ಬಸವಾರಾಧ್ಯ, ಮಮತಾ, ರಮ್ಯಾ ಸತೀಶ್ ಆರಾಧ್ಯ ಇದ್ದರು.