ಬಿಜಿಎಸ್ ನೃತ್ಯ ವೈಭವ ಮತ್ತು ಶಾಲಾ ಕಾಲೇಜುಗಳ ವಾರ್ಷಿಕೋತ್ಸವ ಕಾರ್ಯಕ್ರಮ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : 50 ವರ್ಷಗಳ ಹಿಂದೆಯೇ ಉಚಿತ ವಸತಿ ಮತ್ತು ಅನ್ನದಾಸೋಹ ನೀಡಿ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿದ ಕೀರ್ತಿ ಆದಿಚುಚಂಚನಗಿರಿ ಮಠಾಧಿಶರಾದ ದಿ.ಬಾಲಗಂಗಾಧರನಾಥ ಸ್ವಾಮಿಜಿಗೆ ಸಲ್ಲುತ್ತದೆ ಎಂದು ಆದಿಚುಂಚನಗಿರಿ ಮೈಸೂರು ಶಾಖ ಮಠದ ಸೋಮನಾಥೇಶ್ವರ ಸ್ವಾಮಿಜಿ ಹೇಳಿದರು.
ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಬಿಜಿಎಸ್ ನೃತ್ಯ ವೈಭವ ಮತ್ತು ಶಾಲಾ ಕಾಲೇಜುಗಳ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಶ್ರೀಗಳು ನಿಧನದ ನಂತರವು ಈಗಿನ ನಿರ್ಮಲಾನಂದನಾಥ ಸ್ವಾಮಿಜಿಗಳು ಇದನ್ನು ಮುಂದುವರಿಸಿಕೊಂಡು ಹೋಗುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಮಠವು ತನ್ನದೆ ಕೊಡುಗೆ ನೀಡುತ್ತಿದೆ ಎಂದರು.
ಮಕ್ಕಳ ಶಿಕ್ಷಣದ ವ್ಯವಸ್ಥೆಯಲ್ಲಿ ಯಶಸ್ಸು ಸಾಧಿಸಬೇಕಾದರೆ ತಂದೆ-ತಾಯಿ ಅವರ ಪಾತ್ರ ಅಪಾರವಾಗಿದ್ದು
ಓದಿಗಷ್ಟೆ ಸೀಮಿತಮಾಡದೇ ಅವರನ್ನು ಇತರೆ ಚಟುವಟಿಕೆಗಳಾದ ಕ್ರೀಡೆ,ಸಾಂಸ್ಕೃತಿಕ ಕಲೆಗಳಿಗೆ ಶಿಕ್ಷಣದಷ್ಟೆ ಮಹತ್ವ ನೀಡಿದರೇ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಆರ್.ನಗರ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಸಮಾಜದಲ್ಲಿ ಮಕ್ಕಳಿಗೆ ಮಾನವೀಯ ಮೌಲ್ಯವನ್ನು ಕಲಿಸುವ ಜವಬ್ದಾರಿ ಪ್ರತಿಯೊಬ್ಬ ಶಿಕ್ಷಕ ವರ್ಗದ ಮೇಲಿದ್ದು ಈ ನಿಟ್ಟಿನಲ್ಲಿ ಶಿಕ್ಷಕರು ಕೆಲಸ ಮಾಡಿದಾಗ ಸುಕ್ಷಿತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು
ಜಿ.ಪಂ.ಮಾಜಿ.ಸದಸ್ಯ ಎಂ.ಟಿ.ಕುಮಾರ್ ಕುಮಾರ್ ಮಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಅತ್ಯುತ್ತಮ ವಿದ್ಯಾರ್ಥಿಗಳು, ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದ ಪೋಷಕರಿಗೆ ಬಹುಮಾನವನ್ನು ವಿತರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಎಇಇ ಕೆ.ಬಿ.ಪ್ರಕಾಶ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮು, ಮಾಜಿ ಸದಸ್ಯ ಬಂಡಹಳ್ಳಿ ಕುಚೇಲ್, ಕುಪ್ಪೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಗೌರಮ್ಮ , ಸದಸ್ಯೆ ಶಾರದಮ್ಮ, ಮುಖಂಡರಾದ ತಿಪ್ಪೂರು ಮಂಜು, ಬಾಲೂರು ನಂಜುಂಡೇಗೌಡ, ಮಿಥಿಲಾ ಶಿಕ್ಷಣ ಸಂಸ್ಥೆಯಮಿರ್ಲೆ ಲೋಕನಾಥ್, ಬಿ.ಆರ್.ಸಿ.ವೆಂಕಟೇಶ್, ಬಿ.ಆರ್.ಪಿ.ಗಳಾದ ಕುಪ್ಪೆ ಯೋಗೇಶ್, ಹರೀಶ್,ಸಿ.ಆರ್.ಪಿ.ಸಾಲೇಕೊಪ್ಪಲು ಪ್ರಸಾದ್, ಪ್ರಾಂಶುಪಾಲ ಸಿ.ಎನ್.ಮಹೇಶ್, ಮುಖ್ಯಶಿಕ್ಷಕರಾದ ಚಾಂದಿನಿ, ಶ್ರೀನಿವಾಸ್ ಗೌಡ, ಶಿಕ್ಷಕರಾದ ಮಹೇಶ್, ಗಿರೀಶ್,ಧರ್ಮರಾಜ್, ಬಿ.ಟಿ.ಕುಮಾರಪ್ಪ, ಟಿ.ಕುಮಾರ್, ಮಠದ ವ್ಯವಸ್ಥಾಪಕ ರಾಮಲಿಂಗಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.