Friday, April 18, 2025
Google search engine

HomeUncategorizedರಾಷ್ಟ್ರೀಯಸನ್ಮಾನ ಗಿಟ್ಟಿಸಿಕೊಳ್ಳಲು ರೈಲು ಹಳಿಗಳ ಬೋಲ್ಟ್ ಸಡಿಲಗೊಳಿಸಿದ ಸಿಬ್ಬಂದಿಗಳು; ಮೂವರು ಜೈಲು ಪಾಲು

ಸನ್ಮಾನ ಗಿಟ್ಟಿಸಿಕೊಳ್ಳಲು ರೈಲು ಹಳಿಗಳ ಬೋಲ್ಟ್ ಸಡಿಲಗೊಳಿಸಿದ ಸಿಬ್ಬಂದಿಗಳು; ಮೂವರು ಜೈಲು ಪಾಲು

ಗುಜರಾತ್: ತಾವು ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಇಲಾಖೆ ಅಧಿಕಾರಿಗಳಿಂದ ಸನ್ಮಾನ ಗಿಟ್ಟಿಸಿಕೊಳ್ಳುವ ಪ್ಲಾನ್ ಮಾಡಿ ಕೊನೆಗೆ ಅಧಿಕಾರಿಗಳಿಂದಲೇ ರೈಲ್ವೆ ಇಲಾಖೆಯ ಮೂವರು ಸಿಬ್ಬಂದಿಗಳು ಜೈಲು ಪಾಲಾಗಿರುವ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ.

ಬಂಧಿತ ಆರೋಪಿಗಳನ್ನು ಸುಭಾಷ್ ಪೊದ್ದಾರ್ (39), ಮನೀಶ್ ಮಿಸ್ತ್ರಿ (28) ಮತ್ತು ಶುಭಂ ಜೈಸ್ವಾಲ್ (26) ಎಂದು ಗುರುತಿಸಲಾಗಿದ್ದು, ಇವರು ರೈಲ್ವೆಯ ನಿರ್ವಹಣಾ ವಿಭಾಗದಲ್ಲಿ ಟ್ರ್ಯಾಕ್‌ ಮೆನ್ ಆಗಿದ್ದಾರೆ.

ಈಗಾಗಲೇ ಹಲವೆಡೆ ರೈಲು ಹಳಿಗಳ ಮೇಲೆ ಎಲ್ ಪಿಜಿ ಸಿಲಿಂಡರ್, ಸಿಮೆಂಟ್ ಇಟ್ಟಿಗೆ ಹೀಗೆ ಹಲವಾರು ವಸ್ತುಗಳನ್ನು ರೈಲು ಹಳಿಗಳ ಮೇಲೆ ಇಟ್ಟು ರೈಲು ಹಳಿ ತಪ್ಪಿಸುವ ಯತ್ನ ನಡೆದಿತ್ತು, ಇತ್ತೀಚಿಗೆ ಇಂತಹ ಹಲವಾರು ಘಟನೆಗಳು ನಡೆದಿರುವುದು ಗೊತ್ತಿರುವ ಸಂಗತಿ, ಅದರಂತೆ ಗುಜರಾತ್ ನ ಸೂರತ್ ನಲ್ಲಿ ಮೂವರು ರೈಲ್ವೆ ಸಿಬ್ಬಂದಿಗಳು ಇಲಾಖೆ ಅಧಿಕಾರಿಗಳಿಂದ ಸನ್ಮಾನ ಪಡೆದುಕೊಳ್ಳಬೇಕು, ಉತ್ತಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ಪಡೆಯಬೇಕು ಎಂದು ಪ್ಲಾನ್ ಮಾಡಿ ತಾವು ಕರ್ತವ್ಯ ನಿರ್ವಹಿಸುವ ಪ್ರದೇಶದಲ್ಲೂ ರೈಲು ಹಳಿಗಳ ಬೋಲ್ಟ್ ಸಡಿಲಗೊಳಿಸಿ ಬಳಿಕ ಈ ವಿಚಾರವನ್ನು ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದುಕೊಂಡ ಅಧಿಕಾರಿಗಳು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ರೈಲ್ವೆ ಸಿಬ್ಬಂದಿಗಳು ಅಧಿಕಾರಿಗಳಿಗೆ ರೈಲು ಹಳಿಗಳ ಮೇಲೆ ಇರಿಸಿದ್ದ ಫಿಶ್ ಪ್ಲೇಟ್, ಬೋಲ್ಟ್ ಸಡಿಲಗೊಳಿಸಿದ ವಿಡಿಯೋಗಳನ್ನು ತೋರಿಸಿದ್ದಾರೆ, ವಿಡಿಯೋ ನೋಡಿದ ಬಳಿಕ ಅಧಿಕಾರಿಗಳಿಗೆ ಏನೋ ಅನುಮಾನ ಕಾಡತೊಡಗಿದೆ ಈ ವಿಚಾರದ ಬಗ್ಗೆ ಮೂವರು ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದ್ದಾರೆ ಮೊದ ಮೊದಲು ಸತ್ಯ ಒಪ್ಪಿಕೊಳ್ಳದ ಸಿಬ್ಬಂದಿಗಳು ಇಲಾಖೆ ಅಧಿಕಾರಿಗಳಿಂದ ವಿಚಾರಣೆ ತೀವ್ರಗೊಳಿಸಿದಂತೆ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿ ಮೂವರು ರೈಲ್ವೆ ಸಿಬ್ಬಂದಿಗಳನ್ನು ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

RELATED ARTICLES
- Advertisment -
Google search engine

Most Popular